ಕರ್ನಾಟಕ

karnataka

ETV Bharat / bharat

ಭಾರತೀಯ ಆರ್ಮಿಯನ್ನು ಮೋದಿ ಸೇನೆ ಎಂದ ಯೋಗಿ... ವರದಿ ಕೇಳಿದ ಚುನಾವಣಾ ಆಯೋಗ - ಇಸಿ

ತಿರುವು ಪಡೆದುಕೊಂಡ ಭಾರತೀಯ ಆರ್ಮಿಯನ್ನು 'ಮೋದಿ ಸೇನೆ' ಎಂದು ವ್ಯಾಖ್ಯಾನಿಸಿದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರ ಹೇಳಿಕೆ ವಿವಾದ. ಈ ಕುರಿತು ವರದಿ ಕೊಡುವಂತೆ ಮುಖ್ಯ ಚುನಾವಣಾ ಆಯೋಗವು ಘಾಜಿಯಾಬಾದ್​ ಜಿಲ್ಲಾಧಿಕಾರಿಗೆ ಸೂಚನೆ ನೀಡಿದೆ.

ಯೋಗಿ ಆದಿತ್ಯನಾಥ್

By

Published : Apr 2, 2019, 9:43 AM IST

ನವದೆಹಲಿ:ಭಾರತೀಯ ಆರ್ಮಿಯನ್ನು 'ಮೋದಿ ಸೇನೆ' ಎಂದು ವ್ಯಾಖ್ಯಾನಿಸಿದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರ ಹೇಳಿಕೆ ವಿವಾದದ ತಿರುವು ಪಡೆದುಕೊಂಡಿದ್ದು, ಈ ಕುರಿತು ವರದಿ ಕೊಡುವಂತೆ ಮುಖ್ಯ ಚುನಾವಣಾ ಆಯೋಗವು ಘಾಜಿಯಾಬಾದ್​ ಜಿಲ್ಲಾಧಿಕಾರಿಗೆ ಸೂಚನೆ ನೀಡಿದೆ.

ಘಾಜಿಯಾಬಾದ್​ನಲ್ಲಿ ನಡೆದ ಚುನಾವಣಾ ರಾಲಿಯಲ್ಲಿ ಮಾತನಾಡಿದ್ದ ಯೋಗಿ, ಭಾರತೀಯ ಸೇನೆಯು ಮೋದಿ ಸೇನೆ ಎಂದು ಹೇಳಿದ್ದರು. ಇದರ ವಿರುದ್ಧ ಕೆಂಡಾಮಂಡಲವಾಗಿದ್ದ ವಿಪಕ್ಷಗಳು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದವು.

ಕಾಂಗ್ರೆಸ್​ನವರು ಉಗ್ರರಿಗೆ ಬಿರಿಯಾನಿ ಬಡಿಸಿದರು. ಆದರೆ, ಮೋದಿ ಅವರು ಭಯೋತ್ಪಾದಕರಿಗೆ ಗುಂಡಿನ ಉತ್ತರ ನೀಡಿದರು. ಕಾಂಗ್ರೆಸ್​ ನಾಯಕರು ಉಗ್ರ ಮಸೂದ್​ ಅಜರ್​ಗೆ ಗೌರವ ಸೂಚಿಸುವಂತೆ ಅಜರ್​ ಜೀ ಎಂದು ಕರೆದಿದ್ದರು. ಆದರೆ, ಬಿಜೆಪಿ ಸರ್ಕಾರವು ಅವರ ಕ್ಯಾಂಪ್​ಗಳನ್ನು ಧ್ವಂಸ ಮಾಡಿದೆ ಎಂದು ಯೋಗಿ ಹೇಳಿದ್ದರು.

ABOUT THE AUTHOR

...view details