ಕರ್ನಾಟಕ

karnataka

By

Published : May 23, 2019, 3:58 AM IST

ETV Bharat / bharat

ಮೊದಲು ವಿವಿಪ್ಯಾಟ್​ ಸ್ಲಿಪ್​ ಎಣಿಕೆಗೆ ಒಲ್ಲೆ ಎಂದ ಆಯೋಗ: ವಿಪಕ್ಷಗಳಿಗೆ ಮುಖಭಂಗ

ವಿವಿಪ್ಯಾಟ್​ಗಳನ್ನೇ ಮೊದಲು ಎಣಿಕೆ ಮಾಡಿ, ಆನಂತರ ಮತಯಂತ್ರಗಳ ಎಣಿಕೆ ಮಾಡಬೇಕೆಂದು ಕಾಂಗ್ರೆಸ್​ ನೇತೃತ್ವದಲ್ಲಿ 22 ವಿಪಕ್ಷಗಳು ಮನವಿ ಮಾಡಿದ್ದವು. ಆದರೆ ಇದಕ್ಕೆ ಆಯೋಗ ಒಲ್ಲೆ ಎಂದಿದೆ.

ಚುನಾವಣಾ ಆಯೋಗ

ನವದೆಹಲಿ: ಮತಯಂತ್ರಗಳಿಗಿಂತ ಮೊದಲು ವಿವಿಪ್ಯಾಟ್​ ಸ್ಲಿಪ್​ಗಳನ್ನೇ ಎಣಿಕೆ ಮಾಡಬೇಕೆಂಬ 22 ವಿಪಕ್ಷಗಳ ಬೇಡಿಕೆಯನ್ನು ಚುನಾವಣಾ ಆಯೋಗ ತಿರಸ್ಕರಿಸಿದೆ.

ಮತಯಂತ್ರಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸುತ್ತಲೇ ಇರುವ ವಿಪಕ್ಷಗಳು ಆಯೋಗಕ್ಕೆ ಈ ಬಗ್ಗೆ ದೂರು ನೀಡಿದ್ದವು. ವಿವಿಪ್ಯಾಟ್​ ಸ್ಲಿಪ್​ಗಳನ್ನೇಮೊದಲು ಎಣಿಕೆ ಮಾಡಿ, ಆನಂತರ ಮತಯಂತ್ರಗಳ ಎಣಿಕೆ ಮಾಡಬೇಕೆಂದು ಕಾಂಗ್ರೆಸ್​ ನೇತೃತ್ವದಲ್ಲಿ 22 ವಿಪಕ್ಷಗಳು ಮನವಿ ಮಾಡಿದ್ದವು. ಆದರೆ ಇದಕ್ಕೆ ಆಯೋಗ ಒಲ್ಲೆ ಎಂದಿದೆ.

ವಿವಿಪ್ಯಾಟ್​ ಪರಿಶೀಲನೆಯಲ್ಲಿ ಏನಾದರೂ ವ್ಯತ್ಯಾಸ ಕಂಡುಬಂದಲ್ಲಿ ಖಂಡಿತ ಪ್ಯಾಟ್​ನ ಸ್ಲಿಪ್​ಗಳನ್ನು ಆಯಾ ಕೇಂದ್ರಗಳಲ್ಲಿಯೇ ಎಣಿಕೆ ಮಾಡಲಾಗುತ್ತದೆ ಎಂದು ಆಯೋಗ ಭರವಸೆ ನೀಡಿದೆ.

ಮಂಗಳವಾರ ಕಾಂಗ್ರೆಸ್​ ನಾಯಕ ಹಾಗೂ ವಕೀಲ ಅಭಿಷೇಕ್​ ಸಿಂಘ್ವಿ ಅವರು, ವಿಪಕ್ಷಗಳ ಮನವಿಯನ್ನು ಆಯೋಗ ಪರಿಗಣಿಸಬೇಕೆಂದು ವಾದ ಮಂಡಿಸಿದ್ದರು. ತಮ್ಮ ಬೇಡಿಕೆಯನ್ನು ಆಯೋಗ ಈಡೇರಿಸುವುದಾಗಿ ಹೇಳಿಕೆ ನೀಡಿದೆ ಎಂದೂ ವಿಪಕ್ಷಗಳ ನಾಯಕರು ಹೇಳಿಕೊಂಡಿದ್ದರು. ಆದರೆ, ಇದೀಗ ಆಯೋಗದ ಹೇಳಿಕೆ ವಿಪಕ್ಷಗಳಿಗೆ ಮುಖಭಂಗ ಉಂಟುಮಾಡಿದೆ.

ಇನ್ನೊಂದೆಡೆ, ಸೋಲಿನ ಭಯದಿಂದ ವಿಪಕ್ಷಗಳು ಹೀಗೆ ಮಾಡ್ತಿವೆ ಎಂದು ಬಿಜೆಪಿ ಛೇಡಿಸಿದೆ.

For All Latest Updates

TAGGED:

ABOUT THE AUTHOR

...view details