ನವದೆಹಲಿ:ಲೋಕಸಭಾ ಚುನಾವಣೆ ಬಹುತೇಕ ಕೊನೆಯ ಹಂತಕ್ಕೆ ಬಂದಿದ್ದು ದೇಶದ ಜನತೆ ಮೇ 23ರ ಮಹಾಫಲಿತಾಂಶ ಮೇಲೆ ಕುತೂಹಲದ ಕಣ್ಣಿಟ್ಟಿದ್ದಾರೆ.
ವಿವಿಪ್ಯಾಟ್ ಹಾಗೂ ಇವಿಎಂ ಎರಡನ್ನೂ ಹೊಂದಿಕೆಯಾಗಬೇಕು. ಒಂದು ವೇಳೆ ಹೊಂದಿಕೆ ಆಗದಿದ್ದಲ್ಲಿ ವಿವಿಪ್ಯಾಟ್ ಅನ್ನೇ ಆಯೋಗ ಪರಿಗಣಿಸಲಿದೆ.

ಇವಿಎಂ ಹಾಗೂ ವಿವಿಪ್ಯಾಟ್ ಹೊಂದಾಣಿಕೆ ಈ ಮೊದಲು ಹಲವು ರಾಜ್ಯಗಳ ವಿಧಾನಸಭಾ ಚುನಾವಣೆ ಮಾಡಲಾಗಿತ್ತು. ಆದರೆ ಇದೇ ಮೊದಲ ಬಾರಿಗೆ ಲೋಕಸಭಾ ಚುನಾವಣೆಯಲ್ಲಿ ಈ ಪ್ರಕ್ರಿಯೆ ನಡೆಯಲಿದೆ.
ಒಂದು ವಿಧಾನಸಭಾ ಕ್ಷೇತ್ರದ ಒಂದು ವಿವಿಪ್ಯಾಟ್ ಎಣಿಕೆಗೆ ಒಂದು ಗಂಟೆ ತಗುಲುತ್ತದೆ. ನಾಲ್ಕು ಹೆಚ್ಚುವರಿ ವಿವಿಪ್ಯಾಟ್ ಎಣಿಕೆಯಿಂದ ಮತ್ತೆ ಸರಾಸರಿ ನಾಲ್ಕು ಗಂಟೆ ಬೇಕಾಗುತ್ತದೆ ಎಂದು ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಎಲ್ಲ ಕಾರಣಗಳಿಂದ ಈ ಬಾರಿಯ ಫಲಿತಾಂಶ ಕನಿಷ್ಠ ನಾಲ್ಕು ಗಂಟೆ ವಿಳಂಬವಾಗಲಿದೆ ಎನ್ನುವ ಮಾಹಿತ ಲಭ್ಯವಾಗಿದೆ. ವಿವಿಪ್ಯಾಟ್ ಹಾಗೂ ಇವಿಎಂ ಹೊಂದಾಣಿಕೆಯೇ ಈ ವಿಳಂಬಕ್ಕೆ ಕಾರಣವಾಗಿದೆ.