ನವದೆಹಲಿ: ಅನರ್ಹ ಶಾಸಕರ ಅರ್ಜಿ ವಿಚಾರಣೆ ಮುಕ್ತಾಯವಾಗಿ ಇಂದು ಸುಪ್ರೀಂಕೋರ್ಟ್ ತೀರ್ಪು ನೀಡಲಿದೆ ಎನ್ನುವ ಅನರ್ಹರಿಗೆ ಭಾರೀ ಹಿನ್ನಡೆಯಾಗಿದ್ದರೆ, ಚುನಾವಣಾ ಆಯೋಗ ಕೊಂಚ ಸಿಹಿ ಸುದ್ದಿಯನ್ನೂ ಇದೇ ವೇಳೆ ನೀಡಿದೆ.
ಇಂದಿನ ವಾದ - ಪ್ರತಿವಾದದ ವೇಳೆ ಅನರ್ಹರ ಪರ ಮುಕುಲ್ ರೋಹ್ಟಗಿ ವಾದ ಮಂಡಿಸಿ ಇಂದೇ ತೀರ್ಪು ನೀಡುವಂತೆ ಒತ್ತಾಯ ಮಾಡಿದ್ದರು. ಆದರೆ, ಅರ್ಜಿ ವಿಚಾರಣೆಗೆ ಇನ್ನಷ್ಟು ಕಾಲಾವಕಾಶ ಅಗತ್ಯವನ್ನು ಪರಿಗಣಿಸಿ ಸರ್ವೋಚ್ಛ ನ್ಯಾಯಾಲಯ ಎರಡು ದಿನಗಳ ಮುಂದೂಡಿಕೆ ಮಾಡಿದೆ.
ಅನರ್ಹ ಶಾಸಕರ ಅರ್ಜಿ ವಿಚಾರಣೆ ಬುಧವಾರಕ್ಕೆ ಮುಂದೂಡಿಕೆ: ರೆಬಲ್ಗಳ ಭವಿಷ್ಯ ಅತಂತ್ರ
ಇಂದಿನ ಕೋರ್ಟ್ ಕಲಾಪದಲ್ಲಿ ಚುನಾವಣಾ ಆಯೋಗ ಮಹತ್ವದ ಹೇಳಿಕೆ ನೀಡಿದ್ದು, ಉಪಚುನಾವಣೆಯಲ್ಲಿ ಅನರ್ಹ ಶಾಸಕರು ಸ್ಪರ್ಧಿಸಲು ಆಯೋಗದ ಅಭ್ಯಂತರ ಇಲ್ಲ ಎಂದು ಆಯೋಗದ ಪರ ವಕೀಲ ರಾಕೇಶ್ ದ್ವಿವೇದಿ ಕೋರ್ಟ್ ಮುಂದೆ ಹೇಳಿದ್ದಾರೆ.
ಆಯೋಗದ ಪರ ವಕೀಲ ರಾಕೇಶ್ ದ್ವಿವೇದಿ ಮಾತಿಗೆ ಕಾಂಗ್ರೆಸ್ ಪರ ವಕೀಲ ಕಪಿಲ್ ಸಿಬಲ್ ಇದೇ ವೇಳೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆದರೆ ಶೀಘ್ರ ತೀರ್ಪಿನ ನಿರೀಕ್ಷೆಯಲ್ಲಿರುವ ಅನರ್ಹರಿಗೆ ಆಯೋಗದ ಪರ ವಕೀಲರ ಹೇಳಿಕೆ ಮರು ಜೀವ ನೀಡಿದಂತಾಗಿದೆ.