ಕರ್ನಾಟಕ

karnataka

ETV Bharat / bharat

ಮತ್ತೆರಡು ಕೇಸ್​ನಲ್ಲಿ ಮೋದಿ, ಶಾಗೆ ಇಸಿಯಿಂದ ಕ್ಲೀನ್ ಚಿಟ್! - ಈಟಿವಿ ಭಾರತ

ನೀತಿ ಸಂಹಿತೆ ಉಲ್ಲಂಘಿಸಿದ ಆರೋಪ. ಧಾನಿ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾಗೆ ಕ್ಲೀನ್ ಚಿಟ್ ನೀಡಿದ ಚುನಾವಣಾ ಆಯೋಗ. ನೋಟಿಸ್​ಗೆ ಉತ್ತರ ನೀಡಲು ರಾಹುಲ್​ ಗಾಂಧಿಗೆ ಮೇ.7ರವರೆಗೆ ಅವಕಾಶ.

ಸಂಗ್ರಹ ಚಿತ್ರ

By

Published : May 4, 2019, 2:49 AM IST

ನವದೆಹಲಿ: ನೀತಿ ಸಂಹಿತೆ ಉಲ್ಲಂಘನೆ ಆರೋಪದ ಮತ್ತೆರಡು ಪ್ರಕರಣದಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಚುನಾವಣಾ ಆಯೋಗ ಕ್ಲೀನ್ ಚಿಟ್ ನೀಡಿದೆ. ಹಾಗೆಯೇ ಒಂದು ಪ್ರಕರಣದಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾಗೆ ರಿಲೀಫ್​ ಸಿಕ್ಕಿದೆ.

ನಾಂದೇಡ್ ಹಾಗೂ ವಾರಣಾಸಿಯಲ್ಲಿನ ಭಾಷಣದಲ್ಲಿ ಮೋದಿ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ. ನಾಗ್ಪುರದಲ್ಲಿ ಅಮಿತ್ ಶಾ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಕಾಂಗ್ರೆಸ್ ದೂರು ದಾಖಲಿಸಿತ್ತು.

ಈ ಬಗ್ಗೆ ಆಯೋಗವು ವಿಚಾರಣೆ ನಡೆಸಿ, ಭಾಷಣದಲ್ಲಿ ಯಾವುದೇ ಉಲ್ಲಂಘನೆಯಾಗಿಲ್ಲ ಎಂದು ಮೋದಿ, ಶಾಗೆ ಕ್ಲೀನ್ ಚೀಟ್ ನೀಡಿದೆ.

ಮಧ್ಯಪ್ರದೇಶ ಸಮಾವೇಶದಲ್ಲಿನ ಭಾಷಣದ ಕುರಿತ ನೋಟಿಸ್​ಗೆ ಉತ್ತರ ನೀಡಲು ಸಮಯಾವಕಾಶ ಕೊಡುವಂತೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮಾಡಿದ್ದ ಮನವಿಯನ್ನು ಚುನಾವಣಾ ಆಯೋಗ ಸ್ವೀಕರಿಸಿದೆ. ನೋಟಿಸ್​ಗೆ ಪ್ರತಿಕ್ರಿಯೆ ನೀಡುವ ಅವಧಿಯನ್ನು ಮೇ.7ರವರೆಗೆ ವಿಸ್ತರಿಸಿದೆ.

ABOUT THE AUTHOR

...view details