ನವದೆಹಲಿ: 4.8 ತೀವ್ರತೆಯ ಭೂಕಂಪ ಸಂಭವಿಸಿದ್ದು, ಜನರನ್ನು ಬೆಚ್ಚಿಬೀಳಿಸಿದೆ. ಭಯಭೀತರಾಗಿ ಜನ ಮನೆಯಿಂದ ಹೊರಗೆ ಧಾವಿಸಿದ್ದಾರೆ. ಬೆಳಗ್ಗೆ 7.40ರ ಸುಮಾರಿಗೆ ಈ ಭೂಕಂಪ ಸಂಭವಿಸಿದೆ.
ಗುಜರಾತ್ - ಅಸ್ಸೋಂ, ಹಿಮಾಚಲದಲ್ಲಿ ನಡುಗಿದ ಭೂಮಿ: ಜನ ಭಯಭೀತ - ಗುಜರಾತ್ನ ರಾಜ್ಕೋಟ್ನಲ್ಲಿ ಭೂಕಂಪ
ಅಸ್ಸೋಂನ ಕರಿಮ್‌ಗಂಜ್ ಹಾಗೂ ಗುಜರಾತ್ನ ರಾಜ್ಕೋಟ್ನಲ್ಲಿ ಹಾಗೂ ಹಿಮಾಚಲ ಪ್ರದೇಶದಲ್ಲಿ ಇಂದು ಬೆಳಗ್ಗೆ ಭೂಮಿ ಕಂಪಿಸಿದೆ.
earthquake
ರಾಜ್‌ಕೋಟ್‌ನ ಹೊರತಾಗಿ, ಗೊಂಡಾಲ್, ಜಸ್ದಾನ್ ಮತ್ತು ಜೆಟ್‌ಪುರ ಪಂಥಗಳಲ್ಲೂ ಭೂಮಿ ಕಂಪಿಸಿದೆ. ಭೂಕಂಪನವು ಸುರೇಂದ್ರನಗರ ಜಿಲ್ಲೆಯ ಚೋಟಿಲಾ - ಸಯ್ಲಾ ಮತ್ತು ಸುತ್ತಮುತ್ತಲಿನ ಗ್ರಾಮಗಳ ಮೇಲೆ ಪರಿಣಾಮ ಬೀರಿದೆ.
ಅಸ್ಸೋಂನ ಕರಿಮ್ಗಂಜ್ನಲ್ಲೂ ಇಂದು ಬೆಳಗ್ಗೆ 7:57ಕ್ಕೆ ಭೂಕಂಪ ಉಂಟಾಗಿದೆ. ರಿಕ್ಟರ್ ಮಾಪಕದಲ್ಲಿ 4.1 ತೀವ್ರತೆಯ ಕಂಪನ ದಾಖಲಾಗಿದೆ ಎಂದು ರಾಷ್ಟ್ರೀಯ ಭೂಕಂಪನಶಾಸ್ತ್ರ ಕೇಂದ್ರ ತಿಳಿಸಿದೆ. ಇನ್ನು ಹಿಮಾಚಲ ಪ್ರದೇಶದಲ್ಲೂ ಭೂಮಿ ಕಂಪಿಸಿದೆ ಎಂದು ತಿಳಿದು ಬಂದಿದೆ.
Last Updated : Jul 16, 2020, 9:52 AM IST