ಕೋಲ್ಕತಾ:ಪೂರ್ವ ವಲಯದ ರೈಲ್ವೆ(ಇಆರ್) ಆಸ್ಪತ್ರೆಯ ವೈದ್ಯರೊಬ್ಬರಲ್ಲಿ ಕೊರೊನಾ ಪಾಸಿಟಿವ್ ಕಂಡು ಬಂದಿದೆ ಎಂದು ರೈಲ್ವೆ ವಲಯದ ವಕ್ತಾರರು ಗುರುವಾರ ತಿಳಿಸಿದ್ದಾರೆ.
ಕೋಲ್ಕತ್ತಾ: ಪೂರ್ವ ರೈಲ್ವೆ ಆಸ್ಪತ್ರೆಯ ವೈದ್ಯರಲ್ಲಿ ಕೊರೊನಾ ದೃಢ - ಕೊರೊನಾ
ಕೋಲ್ಕತ್ತಾದ ಪೂರ್ವ ವಿಭಾಗದ ರೈಲ್ವೆ ಆಸ್ಪತ್ರೆಯ ವೈದ್ಯರೊಬ್ಬರಲ್ಲಿ ಕೊರೊನಾ ಸೋಂಕು ಕಂಡು ಬಂದಿದೆ.
ವೈದ್ಯರು ಅನಾರೋಗ್ಯದಿಂದ ಬಳಲುತ್ತಿದ್ದರಿಂದ ಏ.14 ರಂದು ಪರೀಕ್ಷೆಗೆ ಒಳಪಡಿಸಲಾಯಿತು. ಇದರಲ್ಲಿ ಇವರಿಗೆ ಕೊರೊನಾ ಇರುವುದು ದೃಧಪಟ್ಟಿದೆ. ಬಳಿಕ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಇಆರ್ ವಕ್ತಾರ ನಿಖಿಲ್ ಚಕ್ರವರ್ತಿ ಹೇಳಿದ್ದಾರೆ.
ಪೂರ್ವ ರೈಲ್ವೆಯ ಬಿ ಆರ್ ಸಿಂಗ್ ಆಸ್ಪತ್ರೆಯ ಕನಿಷ್ಠ 10 ಸಿಬ್ಬಂದಿ ಈ ವೈದ್ಯರ ಸಂಪರ್ಕದಲ್ಲಿದ್ದರಿಂದ, ಅವರಿಗೆ ಹೋಮ್ ಕ್ವಾರಂಟೈನ್ನಲ್ಲಿ ಇರುವಂತೆ ಸೂಚಿಸಲಾಗಿದೆ. ವೈದ್ಯರ ಕುಟುಂಬದ ನಾಲ್ವರು ಸದಸ್ಯರು ಕೂಡ ಹೋಮ್ ಕ್ವಾರಂಟೈನ್ನಲ್ಲಿರುವಂತೆ ರಾಜ್ಯ ಆರೋಗ್ಯ ಇಲಾಖೆ ಸೂಚಿಸಿದೆ.