ಹೈದರಾಬಾದ್: ಕಾಲ ಪುರುಷ ಯೇಸು ಕ್ರಿಸ್ತನ ಮರು ಹುಟ್ಟಿನ ನೆನಪಾದ ಈಸ್ಟರ್ ಹಬ್ಬವನ್ನು ದೇಶಾದ್ಯಂತ ಇಂದು ಸಂಭ್ರಮದಿಂದ ಆಚರಿಸಲಾಯಿತು. ತಮಿಳುನಾಡು, ಕೇರಳ, ಪುದುಚೆರಿ, ಮುಂಬೈ, ಕರ್ನಾಟಕ ಮೊದಲಾದ ಕಡೆ ಈಸ್ಟರ್ ಹಬ್ಬದ ಸಂಭ್ರಮ ಮನೆ ಮಾಡಿತ್ತು.
ಶನಿವಾರ ರಾತ್ರಿಯೇ ಚರ್ಚ್ ಎದುರು ಕ್ಯಾಂಡಲ್ ಬೆಳಗಿದ ಭಕ್ತರು ಯೇಸುವಿನ ಮರು ಜನ್ಮವನ್ನು ಸ್ಮರಿಸಿದರು.
ಶಿಲುಬೆಗೇರುವ ಯೇಸು ಕ್ರಿಸ್ತ ಶುಕ್ರವಾರ ದೇಹ ತ್ಯಜಿಸುತ್ತಾರೆ. ಅದರ ಮುಂದಿನ ಭಾನುವಾರ ಸಮಾಧಿಯಿಂದ ಬಂದು ಮತ್ತೆ ಪ್ರಕೃತಿಯನ್ನು ಸೇರುತ್ತಾರೆ ಎಂಬುದು ಕ್ರೈಸ್ತ ಸಮುದಾಯದವರ ನಂಬಿಕೆ.
ಈ ಹಬ್ಬದಲ್ಲಿ ಮೊಟ್ಟೆಯನ್ನು ಯೇಸುವಿನ ಮರುಹುಟ್ಟಿನ ಪ್ರತಿನಿಧಿಯಾಗಿ ಸ್ಮರಿಸುವುದು ವಾಡಿಕೆ. ಮೊಟ್ಟೆಯು ಜನ್ಮದ ಪ್ರತೀಕವಾಗಿರುವುದರಿಂದ ಅವುಗಳನ್ನೇ ಕೊಡುಗೆಗಳಾಗಿ ನೀಡುವುದು ವಿದೇಶಗಳಲ್ಲಿ ಸಂಪ್ರದಾಯ.