ಪೂರ್ವ ಗೋದಾವರಿ:ಆಂಧ್ರಪ್ರದೇಶದ ಕಚ್ಚಲೂರು ಬಳಿಯ ದೇವಿ ದರ್ಶನಕ್ಕೆ ತೆರಳಿದ ಪ್ರವಾಸಿ ಬೋಟ್ ಮುಳುಗಡೆಯಾಗಿದ್ದು, ಸುಮಾರು 12ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ.
ದೇವಿ ದರ್ಶನಕ್ಕೆ ತೆರಳಿದ ಬೋಟ್ ಮುಳಗಡೆ 61 ಜನರು ಪ್ರವಾಸೋದ್ಯಮ ಬೋಟ್ ಮೂಲಕ ಪಾಪಿಕೊಂಡದಿಂದ ಗಂಡಿ ಪೋಚಮ್ಮ ದೇವಸ್ಥಾನಕ್ಕೆ ತೆರಳುತ್ತಿದ್ದರು. ಮುನ್ನೆಚ್ಚರಿಕಾ ಕ್ರಮದಿಂದ ಪ್ರವಾಸಿಗರಿಗೆಲ್ಲ ಲೈಫ್ ಜಾಕೆಟ್ ನೀಡಲಾಗಿತ್ತು. ಮಾರ್ಗ ಮಧ್ಯೆ ಬೋಟ್ ಮುಳುಗಡೆಯಾಗಿದ್ದು, 61 ಜನರ ಪೈಕಿ 25 ಜನರನ್ನು ಸ್ಥಳೀಯರು ರಕ್ಷಿಸಿ ದಡಕ್ಕೆ ಸೇರಿಸಿದ್ದಾರೆ. ಆದ್ರೆ ಇಬ್ಬರು ಬೋಟ್ನ ಚಾಲಕರು ಸೇರಿದಂತೆ 12 ಜನರ ಮೃತದೇಹಗಳು ಪತ್ತೆಯಾಗಿದ್ದು, ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಹೆಚ್ಚಾಗಿದೆ.
ದೇವಿ ದರ್ಶನಕ್ಕೆ ತೆರಳಿದ ಬೋಟ್ ಮುಳಗಡೆ ಇನ್ನು ಗೋದಾವರಿ ನದಿ ಕೆಲವು ದಿನದಿಂದಲೂ ಉಕ್ಕಿಹರಿಯುತ್ತಿದ್ದು, ಬೋಟ್ ನಡೆಸುವುದಕ್ಕೆ ಅನುಮತಿ ನೀಡಿರಲಿಲ್ಲ. ಆದ್ರೆ ನೀರು ಹರಿಯುವ ಪ್ರಮಾಣ ಕಡಿಮೆ ಆದ ಹಿನ್ನೆಲೆ ಅಧಿಕಾರಿಗಳು ಪ್ರವಾಸಕ್ಕೆ ಅನುಮತಿ ನೀಡಿದ್ದಾರೆ ಎನ್ನಲಾಗ್ತಿದೆ.
ದೇವಿ ದರ್ಶನಕ್ಕೆ ತೆರಳಿದ ಬೋಟ್ ಮುಳಗಡೆ ಸುದ್ದಿ ತಿಳಿಯುತ್ತಿದ್ದಂತೆ ಜಿಲ್ಲಾಧಿಕಾರಿ ಸಿಎಸ್ ಎಲ್ವಿ ಸುಬ್ರಹ್ಮಣ್ಯಂ ಕರೆ ಮಾಡಿ ಮಾಹಿತಿ ಸಂಗ್ರಹಿಸಿದ್ದಾರೆ. ರಾಜಮಹೇಂದ್ರವರಂನಿಂದ ಸಹಾಯಕ್ಕಾಗಿ ಹೆಲಿಕಾಪ್ಟರ್ ತೆರಳಿ ಕಾರ್ಯಾಚರಣೆ ಕೈಗೊಂಡಿದೆ.
ಪೋಲವರಂನಿಂದ ಪೋಚಮ್ಮ ಗಂಡಿಗೆ ತೆರಳುತ್ತಿರುವ ಸಂದರ್ಭ ಈ ದುರಂತ ಸಂಭವಿಸಿದೆ. ರಸ್ತೆ ಮಾರ್ಗ ಇಲ್ಲದರಿಂದ ಘಟನಾಸ್ಥಳಕ್ಕೆ ಹಡಗು ಮೂಲಕವೇ ತೆರಳಬೇಕು. ಬೋಟ್ನ ಮೂಲಕ ಘಟನಾಸ್ಥಳಕ್ಕೆ ತೆರಳಲು ಸುಮಾರು ಎರಡ್ಮೂರು ಗಂಟೆ ಸಮಯ ಬೇಕು ಎಂದು ಡಿಎಸ್ಪಿ ವೆಂಕೆಟೇಶ್ವರ್ರಾವ್ ತಿಳಿಸಿದ್ದಾರೆ.
ಘಟನೆಯ ಬಗ್ಗೆ ಅಧಿಕಾರಿಗಳೊಡನೆ ಸಿಎಂ ಜಗನ್ ಮಾಹಿತಿ ಕಲೆ ಹಾಕಿದ್ದಾರೆ. ತಕ್ಷಣವೇ ಸಹಾಯಕ್ಕಾಗಿ ದೌಡಾಯಿಸುವಂತೆ ಅಧಿಕಾರಿಗಳಿಗೆ ಸಿಎಂ ಆದೇಶಿಸಿದ್ದಾರೆ. ಘಟನಾಸ್ಥಳಕ್ಕೆ ಪ್ರವಾಸೋದ್ಯಮ ಸಚಿವ ಅವಂತಿ ಶ್ರೀನಿವಾಸ್ ದಿಢೀರ್ ತೆರಳಿದ್ದಾರೆ.
ಎನ್‌ಡಿಆರ್‌ಎಫ್ ತಂಡಗಳು ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯದಲ್ಲಿ ತೊಡಗಿವೆ.