ನವದೆಹಲಿ: ದೆಹಲಿಯಲ್ಲಿ ಇಂದು ಮಧ್ಯಾಹ್ನ ಭೂಕಂಪನ ಸಂಭವಿಸಿದೆ ಎಂದು ನ್ಯಾಷನಲ್ ಸೆಂಟರ್ ಫಾರ್ ಸಿಸ್ಮೋಲಜಿ ತಿಳಿಸಿದೆ.
ರಾಷ್ಟ್ರ ರಾಜಧಾನಿಯಲ್ಲಿ ಕಂಪಿಸಿದ ಭೂಮಿ: ರಿಕ್ಟರ್ ಮಾಪಕದಲ್ಲಿ 3.4 ತೀವ್ರತೆ ದಾಖಲು - ನ್ಯಾಷನಲ್ ಸೆಂಟರ್ ಫಾರ್ ಸಿಸ್ಮೋಲಜಿ
07:42 May 10
ದೆಹಲಿಯಲ್ಲಿ ಭೂಕಂಪ
ಈ ಭೂಕಂಪನ ಒಂದು ತಿಂಗಳ ಅಂತರದಲ್ಲಿ ಮೂರನೇ ಬಾರಿಗೆ ಸಂಭವಿಸಿದ್ದು, ಇದರ ಕೇಂದ್ರಬಿಂದು ಈಶಾನ್ಯ ದೆಹಲಿಯ ವಾಜಿಪುರ್ ಆಗಿದೆ ಎಂದು ಭೂವಿಜ್ಞಾನ ಇಲಾಖೆಯ ಅಡಿಯಲ್ಲಿ ಬರುವ ಸಂಸ್ಥೆಯೊಂದರ ಮುಖ್ಯಸ್ಥ ಜೆ.ಎಲ್.ಗೌತಮ್ ಸ್ಪಷ್ಟನೆ ನೀಡಿದ್ದಾರೆ.
ಇದೇ ಪ್ರದೇಶದಲ್ಲಿ ಏಪ್ರಿಲ್ 12ರಂದು 3.5ರ ತೀವ್ರತೆಯಲ್ಲಿ ಭೂಕಂಪನ ಸಂಭವಿಸಿತ್ತು. ಏಪ್ರಿಲ್ 13ರಂದು 2.7ರ ತೀವ್ರತೆಯಲ್ಲಿ ಭೂಕಂಪನ ಸಂಭವಿಸಿತ್ತು. ಅಧಿಕೃತ ಮಾಹಿತಿಯ ಪ್ರಕಾರ ಇದಕ್ಕೂ ಮೊದಲು 2004ರಲ್ಲಿ 2.8ರ ತೀವ್ರತೆಯಲ್ಲಿ, 2001ರಲ್ಲಿ 3.4ರ ತೀವ್ರತೆಯಲ್ಲಿ ದೆಹಲಿಯಲ್ಲಿ ಭೂಕಂಪನ ಸಂಭವಿಸಿತ್ತು.
ದೆಹಲಿಯಲ್ಲಿ 1956ರ ಅಕ್ಟೋಬರ್ 10ರಂದು 6.7ರ ತೀವ್ರತೆಯಲ್ಲಿ ಸಂಭವಿಸಿದ್ದು ಅತಿ ದೊಡ್ಡ ಭೂಕಂಪನವಾಗಿದೆ. ಈಗ ಮಧ್ಯಮ ಪ್ರಮಾಣದಲ್ಲಿ ಭೂಕಂಪನ ಸಂಭವಿಸಿದ್ದು, ಐದು ಕಿಲೋಮೀಟರ್ವರೆಗೆ ತೀವ್ರತೆ ವ್ಯಾಪಿಸಿದ್ದು, ಯಾವುದೇ ಸಾವು ನೋವುಗಳು ಸಂಭವಿಸಿಲ್ಲ.