ಗಾಂಧಿನಗರ: ಗುಜರಾತ್‌ನ ಕಚ್ ಪ್ರದೇಶದಲ್ಲಿ ರಾತ್ರಿ 8:15ಕ್ಕೆ 5.8 ತೀವ್ರತೆಯ ಭೂಕಂಪ ಸಂಭವಿಸಿದೆ. ರಾಜ್ಕೋಟ್ನಿಂದ ಉತ್ತರ ಮತ್ತು ವಾಯುವ್ಯ ದಿಕ್ಕಿನ 122 ಕಿ.ಮೀ. ಪ್ರದೇಶದಲ್ಲಿ ಕಂಪನದ ಕೇಂದ್ರ ಗುರುತಿಸಲಾಗಿದೆ ಎಂದು ನ್ಯಾಷನಲ್ ಸೆಂಟರ್ ಫಾರ್ ಸಿಸ್ಮೋಲಜಿ ತಿಳಿಸಿದೆ.
ಗುಜರಾತ್ನಲ್ಲಿ ಭೂಕಂಪ, ರಿಕ್ಟರ್ ಮಾಪಕದಲ್ಲಿ 5.8 ತೀವ್ರತೆ ದಾಖಲು.. - ಗುಜರಾತ್ ಭೂಕಂಪ ಸುದ್ದಿ
ಗುಜರಾತ್‌ನ ಕಚ್ ಪ್ರದೇಶದಲ್ಲಿ ರಾತ್ರಿ 8:15ಕ್ಕೆ 5.8 ತೀವ್ರತೆಯ ಭೂಕಂಪನ ಸಂಭವಿಸಿದ್ದು, ಯಾವುದೇ ಆಸ್ತಿ ಅಥವಾ ಪ್ರಾಣಹಾನಿ ಬಗ್ಗೆ ವರದಿಯಾಗಿಲ್ಲ.
ಗುಜರಾತ್ನಲ್ಲಿ ಭೂಕಂಪ
ವರದಿಗಳ ಪ್ರಕಾರ, ಗಾಂಧಿನಗರ, ಅಹಮದಾಬಾದ್, ರಾಜ್‌ಕೋಟ್, ಕಚ್, ಮೊರ್ಬಿ, ಜಾಮ್‌ನಗರ್, ಪಟಾಣ್, ವಡೋದರಾ ಪ್ರದೇಶದಲ್ಲಿ ಸುಮಾರು ನಾಲ್ಕರಿಂದ ಒಂಬತ್ತು ಸೆಕೆಂಡುಗಳ ಕಾಲ ಭೂಮಿ ಕಂಪಿಸಿದ ಅನುಭವವಾಗಿದ್ದು, ಭೂಕಂಪದ ಕೇಂದ್ರಬಿಂದು ಕಚ್ ಪ್ರದೇಶದ ಸಮೀಪದಲ್ಲಿದೆ ಎನ್ನಲಾಗಿದೆ. ಯಾವುದೇ ಆಸ್ತಿ ಅಥವಾ ಪ್ರಾಣಹಾನಿ ಬಗ್ಗೆ ವರದಿಯಾಗಿಲ್ಲ.