ಐಜ್ವಾಲ್ (ಮಿಜೋರಾಂ): ಈಶಾನ್ಯ ರಾಜ್ಯವಾದ ಮಿಜೋರಾಂನಲ್ಲಿ ಬೆಳಗ್ಗೆ 5.3ರಷ್ಟು ತೀವ್ರತೆಯಲ್ಲಿ ಭೂಕಂಪ ಸಂಭವಿಸಿದೆ. ಪರಿಣಾಮವಾಗಿ ಕೆಲವು ಮನೆಗಳಿಗೆ ಹಾನಿಯಾಗಿದ್ದು, ಕೆಲ ಪ್ರದೇಶಗಳ ರಸ್ತೆಗಳು ಬಿರುಕುಬಿಟ್ಟಿವೆ.
ಭೂಕಂಪನದಿಂದಾಗಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ರಾಜ್ಯ ಪರಿಸರ ವಿಜ್ಞಾನ ಮತ್ತು ಖನಿಜ ಸಂಪನ್ಮೂಲ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ನ್ಯಾಷನಲ್ ಸೆಂಟರ್ ಫಾರ್ ಸಿಸ್ಮೋಲಜಿಯ ಮಾಹಿತಿಯಂತೆ ಬೆಳಗ್ಗೆ ಮುಂಜಾನೆ 4.10ಕ್ಕೆ ಭೂಕಂಪ ಸಂಭವಿಸಿದ್ದು, ಭಾರತ - ಮಯನ್ಮಾರ್ ಗಡಿಯ ಚಾಂಫೈ ಜಿಲ್ಲೆಯ ಝೋಖಾವ್ತಾರ್ ಪಟ್ಟಣ ಭೂಕಂಪದ ಕೇಂದ್ರ ಬಿಂದುವಾಗಿದೆ.