ಚಂಬಾ: ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯಲ್ಲಿ ಇಂದು ಬೆಳಗ್ಗೆ 6.25ಕ್ಕೆ ಲಘು ಭೂಕಂಪ ಸಂಭವಿಸಿರುವುದಾಗಿ ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ಮಾಹಿತಿ ನೀಡಿದೆ.
ಹಿಮಾಚಲ ಪ್ರದೇಶದಲ್ಲಿ ಲಘು ಭೂಕಂಪ - ಚಂಬಾ ಭೂಕಂಪ ಸುದ್ದಿ
ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯಲ್ಲಿ 2.9 ತೀವ್ರತೆಯ ಲಘು ಭೂಕಂಪವಾಗಿದ್ದು, ಯಾವುದೇ ಸಾವು-ನೋವು ಸಂಭವಿಸಿಲ್ಲ.
ಲಘು ಭೂಕಂಪ
ರಿಕ್ಟರ್ ಮಾಪಕದಲ್ಲಿ 2.9ರಷ್ಟು ತೀವ್ರತೆ ದಾಖಲಾಗಿದೆ. ಭೂಮಿ ಕಂಪಿಸಿದ ಅನುಭವವಾಗುತ್ತಿದ್ದಂತೆ ಜನರು ಭಯಭೀತರಾಗಿ ಮನೆಗಳಿಂದ ಹೊರ ಬಂದಿದ್ದಾರೆ. ಭೂಕಂಪದ ಕೇಂದ್ರ ಬಿಂದು ಧರ್ಮಶಾಲಾದಿಂದ ಉತ್ತರಕ್ಕೆ 73 ಕಿ.ಮೀ. ದೂರ ಹಾಗೂ 11 ಕಿ.ಮೀ. ಆಳದಲ್ಲಿದೆ.
ಘಟನೆಯಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ. ಅಕ್ಟೋಬರ್ 23ರಂದು ಕೂಟ ಚಂಬಾದಲ್ಲಿ 2.7 ತೀವ್ರತೆಯ ಭೂಕಂಪ ಸಂಭವಿಸಿತ್ತು.