ಕರ್ನಾಟಕ

karnataka

ETV Bharat / bharat

ಲಡಾಖ್​ನ ಕಾರ್ಗಿಲ್​ನಲ್ಲಿ ಮತ್ತೆ ಭೂಕಂಪನ - ಕಾರ್ಗಿಲ್​ನಲ್ಲಿ ಭೂಕಂಪ

ಲಡಾಖ್​ನ ಕಾರ್ಗಿಲ್​ನಲ್ಲಿ ಇಂದು ಮುಂಜಾನೆ ಮತ್ತೆ ಭೂಕಂಪ ಸಂಭವಿಸಿದ್ದು, ರಿಕ್ಟರ್​ ಮಾಪಕದಲ್ಲಿ 4.7 ತೀವ್ರತೆ ದಾಖಲಾಗಿದೆ.

Earthquake in Kargil of  Ladakh
ಲಡಾಖ್​ನ ಕಾರ್ಗಿಲ್​ನಲ್ಲಿ ಭೂಕಂಪ

By

Published : Jul 5, 2020, 7:47 AM IST

ಕಾರ್ಗಿಲ್ : ಇಂದು ಮುಂಜಾನೆ 3:37 ರ ಸುಮಾರಿಗೆ ಲಡಾಖ್​​ನ ಕಾರ್ಗಿಲ್​ನಲ್ಲಿ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 4.7 ತೀವ್ರತೆ ದಾಖಲಾಗಿದೆ. ಕಾರ್ಗಿಲ್‌ನ ವಾಯುವ್ಯ ದಿಕ್ಕಿನಲ್ಲಿ 433 ಕಿ.ಮೀ. ದೂರದಲ್ಲಿ ಭೂಕಂಪದ ಕೇಂದ್ರ ಬಿಂದು ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರದ ಕೇಂದ್ರ (ಎನ್‌ಸಿಎಸ್) ತಿಳಿಸಿದೆ.

ಇದಕ್ಕೂ ಮುನ್ನ ಗುರುವಾರ, ಮಧ್ಯಾಹ್ನ 11 ಗಂಟೆಯ ಹೊತ್ತಿಗೆ ಕಾರ್ಗಿಲ್​​ನಲ್ಲಿ ಭೂಕಂಪ ಸಂಭವಿಸಿತ್ತು. ರಿಕ್ಟರ್ ಮಾಪಕದಲ್ಲಿ 4.5 ರ ತೀವ್ರತೆ ದಾಖಲಾಗಿತ್ತು.

ಭೂಕಂಪನದಿಂದ ಯಾವುದೇ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿ ನಷ್ಟವಾಗಿರುವ ಬಗ್ಗೆ ವರದಿಯಾಗಿಲ್ಲ.

ABOUT THE AUTHOR

...view details