ರಾಷ್ಟ್ರ ರಾಜಧಾನಿ ದೆಹಲಿ ಸಮೀಪವೇ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 4.6ರಷ್ಟು ತೀವ್ರತೆ ದಾಖಲಿಸಿದೆ. ಹರಿಯಾಣದ ರೊಹ್ಟಕ್ ಸಮೀಪ ಭೂಕಂಪನದ ಕೇಂದ್ರ ಬಿಂದುವಾಗಿದೆ ಎಂದು ರಾಷ್ಟ್ರೀಯ ಭೂಕಂಪನ ಶಾಸ್ತ್ರದ ಅಧಿಕಾರಿಗಳು ತಿಳಿಸಿದ್ದಾರೆ.
ಹರಿಯಾಣದ ರೊಹ್ಟಕ್‌ನಲ್ಲಿ 4.6 ತೀವ್ರತೆಯ ಭೂಕಂಪನ - ಭೂಕಂಪನ
ಹರಿಯಾಣದ ರೊಹ್ಟಕ್‌ನಲ್ಲಿ 4.6 ತೀವ್ರತೆಯ ಭೂಕಂಪನವಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರದ ಅಧಿಕಾರಿಗಳು ತಿಳಿಸಿದ್ದಾರೆ.
ಹರಿಯಾಣದ ರೊಹ್ಟಕ್‌ನಲ್ಲಿ 4.6 ತೀವ್ರತೆಯ ಭೂಕಂಪನ
ರಾತ್ರಿ 9 ಗಂಟೆ 8 ನಿಮಿಷಕ್ಕೆ ಭೂಮಿಯ 5 ಕಿಲೋ ಮೀಟರ್ ಆಳದಲ್ಲಿ ಕಂಪನ ಸಂಭವಿಸಿದೆ. ರಾತ್ರಿ 10 ಗಂಟೆ ಸುಮಾರಿಗೆ 2ನೇ ಬಾರಿ ಕಂಪಿಸಿದ ಅನುಭವವಾಗಿದೆ. ಇದರ ತೀವ್ರತೆ ರಿಕ್ಟರ್ ಮಾಪಕದಲ್ಲಿ 2.9 ರಷ್ಟು ದಾಖಲಾಗಿದೆ.
ದೆಹಲಿ ಸುತ್ತಮುತ್ತಲಿನ ಪ್ರದೇಶದಲ್ಲಿ ಭಾರಿ ಕಂಪನದ ಅನುಭವವಾಗಿದ್ದು, ಮನೆಯಿಂದ ಹೊರ ಓಡಿಬಂದ ಜನರು ಸ್ವಲ್ಪ ಹೊತ್ತು ಆತಂಕದಲ್ಲಿದ್ದರು.
Last Updated : May 29, 2020, 11:32 PM IST