ದಿಗ್ಲಿಪುರ (ಅಂಡಮಾನ್ ನಿಕೋಬರ್ ): ದೇಶದ ದಕ್ಷಿಣ ಭಾಗದಲ್ಲಿರುವ ಅಂಡಮಾನ್ ನಿಕೋಬರ್ ದ್ವೀಪ ಪ್ರದೇಶದಲ್ಲಿ ಭೂಕಂಪನ ಸಂಭವಿಸಿದೆ ಎಂದು ನ್ಯಾಷನಲ್ ಸೆಂಟರ್ ಫಾರ್ ಸಿಸ್ಮೋಲಜಿ ಭಾನುವಾರ ಮಾಹಿತಿ ನೀಡಿದೆ.
ದಿಗ್ಲಿಪುರದಿಂದ ಸುಮಾರು 55 ಕಿಲೋ ಮೀಟರ್ ದೂರದಲ್ಲಿ ಸಂಜೆ 7.05ಕ್ಕೆ 10 ಕಿಲೋಮೀಟರ್ ಆಳದಲ್ಲಿ ಭೂಕಂಪನ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 4.3ರಷ್ಟು ತೀವ್ರತೆ ದಾಖಲಾಗಿದೆ ಎಂದು ನ್ಯಾಷನಲ್ ಸೆಂಟರ್ ಫಾರ್ ಸಿಸ್ಮೋಲಜಿ ಹೇಳಿದೆ.