ಹೈದರಾಬಾದ್: ಪ್ರತಿ ವಲಸೆ ಕಾರ್ಮಿಕ ಕುಟುಂಬಕ್ಕೆ ತಮ್ಮ ಮನೆಗಳಿಗೆ ಮರಳಲು ಉಚಿತ ಸಾರಿಗೆ ನೀಡಬೇಕೆಂದು ಕೇಂದ್ರದ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಒತ್ತಾಯಿಸಿದ್ದಾರೆ.
ಪ್ರತೀ ವಲಸೆ ಕಾರ್ಮಿಕರ ಕುಟುಂಬಕ್ಕೆ 10 ಸಾವಿರ ರೂ. ಕೊಡಬೇಕು: ಪಿ.ಚಿದಂಬರಂ - ಪ್ರತಿ ವಲಸೆ ಕಾರ್ಮಿಕ ಕುಟುಂಬಕ್ಕೆ ಪರಿಹಾರ
ವಲಸೆ ಕಾರ್ಮಿಕರು ಈಗಾಗಲೇ ಹಣವಿಲ್ಲದೆ 2 ತಿಂಗಳು ಕಳೆದಿದ್ದಾರೆ. ಪ್ರಸ್ತುತ ಬಿಕ್ಕಟ್ಟನ್ನು ಎದುರಿಸಲು ಸರ್ಕಾರ ತುರ್ತಾಗಿ ಪ್ರತಿ ವಲಸೆ ಕಾರ್ಮಿಕ ಕುಟುಂಬಕ್ಕೆ 10 ಸಾವಿರ ರೂಪಾಯಿ ನೀಡಬೇಕು ಎಂದು ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಹೇಳಿದ್ದಾರೆ.
ಈ ಬಗ್ಗೆ ಟ್ವಿಟರ್ನಲ್ಲಿ ವಿಡಿಯೋ ಬಿಡುಗಡೆ ಮಾಡಿರುವ ಅವರು, ದೇಶದಲ್ಲಿ ಲಾಕ್ಡೌನಿಂದಾಗಿ ವಲಸೆ ಕಾರ್ಮಿಕರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ತಾವು ಕೆಲಸ ಮಾಡುವ ಸ್ಥಳದಿಂದ ತಮ್ಮ ಊರಿಗೆ ಹೋಗಲು ಉಚಿತ ಸಾರಿಗೆ ವ್ಯವಸ್ಥೆ ಮಾಡಬೇಕು. ರೈಲ್ವೆ ಇಲಾಖೆ ಆದಷ್ಟು ಹೆಚ್ಚು ರೈಲುಗಳನ್ನು ಓಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ರಾಜ್ಯಕ್ಕೆ ಮರಳಿದ ನಂತರ ಪರೀಕ್ಷೆ ನಡೆಸಿ ಪ್ರತಿ ವಲಸೆ ಕಾರ್ಮಿಕ ಕುಟುಂಬಕ್ಕೆ ಪ್ರಸ್ತುತ ಬಿಕ್ಕಟ್ಟನ್ನು ಎದುರಿಸಲು 10 ಸಾವಿರ ರೂಪಾಯಿ ನೀಡಬೇಕು. ಈಗಾಗಲೇ ಹಣವಿಲ್ಲದೆ 2 ತಿಂಗಳು ಕಳೆದಿದ್ದಾರೆ. ಮುಂದಿನ ಎರಡು ತಿಂಗಳುಗಳ ಕಾಲ ಅವರು ಹಣ ಗಳಿಸಲು ಕಷ್ಟವಾಗಬಹುದು. ಹೀಗಾಗಿ ತುರ್ತಾಗಿ 10 ಸಾವಿರ ರೂಪಾಯಿ ನೀಡಬೇಕು ಎಂದು ಒತ್ತಾಯಿಸಿದ್ದಾರೆ.