ಕರ್ನಾಟಕ

karnataka

ETV Bharat / bharat

ಕೋವಿಡ್​ ಹಾವಳಿ: ಆರೋಗ್ಯ ಕಾರ್ಯಕರ್ತರಿಗೆ 50 ಲಕ್ಷ ರೂ. ಜೀವ ವಿಮೆ ಘೋಷಿಸಿದ ಗೋವಾ ಸರ್ಕಾರ - ಪ್ರಮೋದ್ ಸಾವಂತ್ ಟ್ವೀಟ್

ಕೋವಿಡ್​ನಿಂದಾಗಿ ಅಥವಾ ಕೊರೊನಾ ಸಂಬಂಧಿತ ಕರ್ತವ್ಯದಲ್ಲಿದ್ದಾಗ ಪ್ರಾಣಹಾನಿ ಸಂಭವಿಸಿದಲ್ಲಿ ಆರೋಗ್ಯ ಕಾರ್ಯಕರ್ತರಿಗೆ 50 ಲಕ್ಷ ರೂಪಾಯಿಗಳ ವಿಮೆಯನ್ನು ಒದಗಿಸಲಾಗುವುದು ಎಂದು ಗೋವಾ ಸರ್ಕಾರ ತಿಳಿಸಿದೆ.

Pramod Sawant
ಪ್ರಮೋದ್ ಸಾವಂತ್

By

Published : Sep 13, 2020, 4:33 PM IST

ಪಣಜಿ:ರಾಜ್ಯದಲ್ಲಿ ಕೊರೊನಾ ಹಾವಳಿ ಹೆಚ್ಚಾಗಿದ್ದು, ರಾಜ್ಯದ ಎಲ್ಲಾ ಆರೋಗ್ಯ ಕಾರ್ಯಕರ್ತರಿಗೆ ತಲಾ 50 ಲಕ್ಷ ರೂ. ಜೀವ ವಿಮೆ ಸೌಲಭ್ಯವನ್ನು ನೀಡುವುದಾಗಿ ಗೋವಾ ಸರ್ಕಾರ ಘೋಷಿಸಿದೆ.

ಕೋವಿಡ್​ನಿಂದಾಗಿ ಅಥವಾ ಕೊರೊನಾ ಸಂಬಂಧಿತ ಕರ್ತವ್ಯದಲ್ಲಿದ್ದಾಗ ಪ್ರಾಣಹಾನಿ ಸಂಭವಿಸಿದಲ್ಲಿ ಆರೋಗ್ಯ ಕಾರ್ಯಕರ್ತರಿಗೆ 50 ಲಕ್ಷ ರೂಪಾಯಿಗಳ ವಿಮೆಯನ್ನು ಒದಗಿಸಲಾಗುವುದು ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಟ್ವೀಟ್ ಮಾಡಿದ್ದಾರೆ.

ವೈದ್ಯರು, ನರ್ಸ್​ಗಳು, ಆಶಾ ಕಾರ್ಯಕರ್ತೆಯರು ಸೇರಿದಂತೆ ಗೋವಾದ ಎಲ್ಲ ಆರೋಗ್ಯ ಕಾರ್ಯಕರ್ತರಿಗೆ 50 ಲಕ್ಷ ರೂ.ಗಳ ವಿಮೆ ವಿಸ್ತರಿಸಲಾಗಿದೆ ಎಂದು ಸಾವಂತ್ ಹೇಳಿದ್ದಾರೆ.

ಗೋವಾದಲ್ಲಿ ಪ್ರಸ್ತುತ 24,185 ಕೊರೊನಾ ಕೇಸ್​ಗಳಿದ್ದು, ಈ ಪೈಕಿ 5,323 ಪ್ರಕರಣಗಳು ಸಕ್ರಿಯವಾಗಿವೆ.

ABOUT THE AUTHOR

...view details