ಕರ್ನಾಟಕ

karnataka

ETV Bharat / bharat

ಮೋದಿ ಉಡುಗೊರೆಗಳ ಹರಾಜು.. ಕೋಟಿ ರೂಪಾಯಿಗೆ ಹರಾಜಾದ ನಮೋ ಫೋಟೋ, ಕಳಸ! - ಪ್ರಧಾನಿ ಮೋದಿ

ಹುಟ್ಟುಹಬ್ಬದ ಪ್ರಯುಕ್ತ ಪ್ರಧಾನಿ ಮೋದಿಗೆ ನೀಡಿರುವ ಉಡುಗೊರೆಗಳನ್ನ ಸಂಸ್ಕೃತಿ ಸಚಿವಾಲಯ ಇ-ಹರಾಜಿಗೆ ಇರಿಸಿದ್ದು, ಹಲವು ವಸ್ತುಗಳು ಭಾರಿ ಮೊತ್ತಕ್ಕೆ ಹರಾಜಾಗಿವೆ.

ಕೋಟಿ ರೂಪಾಯಿಗೆ ಹರಾಜಾದ ನಮೋ ಫೋಟೋ, ಕಳಸ

By

Published : Sep 18, 2019, 7:53 AM IST

ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬ ಪ್ರಯುಕ್ತ ಮೋದಿ ಅವರಿಗೆ ನೀಡಲಾಗಿದ್ದ ಬೆಳ್ಳಿ ಕಿರೀಟ ಮತ್ತು ಫೋಟೋ ಸ್ಟ್ಯಾಂಡ್ ಬರೋಬ್ಬರಿ ಒಂದು ಕೋಟಿ ರೂಪಾಯಿಗೆ ಹರಾಜಾಗಿವೆ.

ಮೋದಿಗೆ ಬಂದಿರುವ ಉಡುಗೊರೆಗಳನ್ನ ಸಂಸ್ಕೃತಿ ಸಚಿವಾಲಯ ಇ-ಹರಾಜಿಗೆ ಇರಿಸಿದ್ದು, ಗುಜರಾತಿ ಭಾಷೆಯಲ್ಲಿ ಒಂದು ಸಂದೇಶವಿರುವ 500 ರೂಪಾಯಿ ಮೂಲ ಬೆಲೆಯ ಮೋದಿ ಫೋಟೋ ಸ್ಟ್ಯಾಂಡ್​ ಬರೋಬ್ಬರಿ ಒಂದು ಕೋಟಿ ರೂಪಾಯಿಗೆ ಹರಾಜಾಗಿದೆ. ಇನ್ನು, 18 ಸಾವಿರ ಮೂಲ ಬೆಲೆಯ ಬೆಳ್ಳಿ ಕಳಸ ಒಂದು ಕೋಟಿ ಮುನ್ನೂರು ರೂಪಾಯಿಗೆ ಹರಾಜಾಗಿದೆ.

ಶಾಲು, ಜಾಕೆಟ್​ಗಳು ಸೇರಿದಂತೆ ಬರೋಬ್ಬರಿ 2,700 ವಸ್ತುಗಳನ್ನ ಸೆ.14 ರಿಂದ ಅ.3ರ ವರೆಗೆ ಹರಾಜಿಗೆ ಇರಿಸಿದ್ದು ಆಸಕ್ರಿ ಇರುವವರು www. pmmementos.gov.in ಇಲ್ಲಿಗೆ ಭೇಟಿ ನೀಡಿ ಆನ್​ಲೈನ್​ ಮೂಲಕ ವಸ್ತುಗಳನ್ನ ಕೊಳ್ಳಬಹುದಾಗಿದೆ.ಇನ್ನು, ಹರಾಜಿನ ಮೂಲಕ ಬಂದ ಹಣವನ್ನ ನಮಾಮಿ ಗಂಗೆ ಯೋಜನೆಗೆ ಬಳಸಲಾಗುವುದು ಎಂದು ತಿಳಿಸಲಾಗಿದೆ.

ABOUT THE AUTHOR

...view details