ಕರ್ನಾಟಕ

karnataka

ETV Bharat / bharat

ಡಿಸ್ಲೆಕ್ಸಿಯಾ.. ಇದು ಕಲಿಕೆಯಲ್ಲಿನ ಅಸ್ವಸ್ಥತೆ ಅಷ್ಟೇ, ಅನಾರೋಗ್ಯವಲ್ಲ!! - ಡಿಸ್ಲೆಕ್ಸಿಯಾ

ಡಿಸ್ಲೆಕ್ಸಿಯಾವು ನರಮಂಡಲ-ನರವೈಜ್ಞಾನಿಕ ಪ್ರೇರಿತ ಅಸ್ವಸ್ಥತೆಯಾಗಿದೆ. ಮತ್ತು ಇದು ಆನುವಂಶಿಕ ಕಾರಣಗಳಿಂದ ಉಂಟಾಗಬಹುದು. ಇದು ದೈಹಿಕ ಕಾಯಿಲೆಯಲ್ಲದ ಕಾರಣ, ಮಗುವಿನ ಶಾರೀರಿಕ ಆರೋಗ್ಯದಿಂದ ಈ ಲಕ್ಷಣಗಳನ್ನು ಗುರುತಿಸಲು ಸಾಧ್ಯವಿಲ್ಲ. ಆದರೆ, ಸಾಮಾನ್ಯವಾಗಿ ಮಗು ಶಾಲೆಗೆ ಹೋಗಲು ಪ್ರಾರಂಭಿಸಿದಾಗ ರೋಗಲಕ್ಷಣಗಳನ್ನು ಗಮನಿಸಬಹುದು..

Dyslexia: A Learning Disorder, Not An Illness
ಡಿಸ್ಲೆಕ್ಸಿಯಾ: ಇದು ಕಲಿಯಲ್ಲಿನ ಅಸ್ವಸ್ಥತೆ,,, ಅನಾರೋಗ್ಯವಲ್ಲ...!!

By

Published : Oct 5, 2020, 5:08 PM IST

ಕೆಲ ಪೋಷಕರು ತಮ್ಮ ಮಕ್ಕಳು ಸರಿಯಾಗಿ ಅಧ್ಯಯನ ಮಾಡದಿರುವ ಬಗ್ಗೆ ದೂರು ನೀಡುವುದನ್ನು ನಾವು ಹೆಚ್ಚಾಗಿ ಕೇಳಿರುತ್ತೇವೆ. ಮಕ್ಕಳು ಸರಿಯಾಗಿ ಓದದೆ, ಬರೆಯದೆ ಅಥವಾ ಕಲಿಯದೆ ಇರುವುದು ಪೋಷಕರನ್ನು ಕಾಡಬಹುದು. ಆದರೆ, ಅವೆಲ್ಲಾ ಚಿಕ್ಕ ವಯಸ್ಸಿನಲ್ಲಿ ಸಾಮಾನ್ಯ. ಆದರೆ, ಕೆಲವು ಸಂದರ್ಭಗಳಲ್ಲಿ ಮಗುವು ಅಕ್ಷರಗಳನ್ನು ಗುರುತಿಸಲು, ಪದಗಳನ್ನು ಓದಲು, ಅವುಗಳನ್ನು ಬರೆಯುವಲ್ಲಿ ಸಮಸ್ಯೆಗಳನ್ನು ಎದುರಿಸಬಹುದು. ಇದು ಸಾಮಾನ್ಯವಲ್ಲ. ಇದು ಡಿಸ್ಲೆಕ್ಸಿಯಾ ಎಂಬ ಕಲಿಕೆಯ ಅಸ್ವಸ್ಥತೆಯಿಂದಾಗಿರಬಹುದು. ಈ ಸ್ಥಿತಿಯನ್ನು ಕೆಲವು ಹಾಲಿವುಡ್ ಮತ್ತು ಬಾಲಿವುಡ್ ಚಲನಚಿತ್ರಗಳಲ್ಲಿ ಹೈಲೈಟ್ ಮಾಡಲಾಗಿದೆ. ಈ ಬಗ್ಗೆ ತಜ್ಞ ಮತ್ತು ಹಿರಿಯ ಮನೋವೈದ್ಯ ಡಾ. ವೀಣಾ ಕೃಷ್ಣನ್ ಮಾಹಿತಿ ನೀಡಿದ್ದಾರೆ.

ಡಿಸ್ಲೆಕ್ಸಿಯಾ ಎಂದರೇನು? :ಡಿಸ್ಲೆಕ್ಸಿಯಾ ಕುರಿತು ಡಾ. ಕೃಷ್ಣನ್ ಹೀಗೆ ವಿವರಿಸುತ್ತಾರೆ, ಇದು ಒಂದು ರೀತಿಯ ಮಾನಸಿಕ ಸ್ಥಿತಿಯಾಗಿದೆ. ಈ ಡಿಸಾರ್ಡರ್​ ಇರುವ ಮಗುವಿಗೆ ಯಾವುದೇ ರೀತಿಯ ಮಾಹಿತಿ ಪಡೆಯಲು, ಅರ್ಥಮಾಡಿಕೊಳ್ಳಲು ಮತ್ತು ಬಳಸಲು ಸಾಧ್ಯವಾಗುವುದಿಲ್ಲ. ಇದನ್ನು ಕಲಿಕೆಯ ಅಸ್ವಸ್ಥತೆ ಎಂದೂ ಕರೆಯುತ್ತಾರೆ. ಇದು ಮಗುವಿನ ಶಿಕ್ಷಣದ ಮೇಲೆ ಮಾತ್ರವಲ್ಲ.

ಮಗು ಭಾಗವಹಿಸುವ ಕ್ರೀಡೆ ಮತ್ತು ಇತರ ನಿತ್ಯದ ಚಟುವಟಿಕೆಗಳ ಮೇಲೂ ಪರಿಣಾಮ ಬೀರುತ್ತದೆ. ಅಂಕಿಅಂಶಗಳ ಪ್ರಕಾರ ಒಟ್ಟು ಮಕ್ಕಳಲ್ಲಿ ಸುಮಾರು 10 ಪ್ರತಿಶತ ಮಕ್ಕಳಿಗೆ ಕಲಿಕೆಯಲ್ಲಿ ಅಸ್ವಸ್ಥತೆ ಇದೆ ಎಂದು ತಿಳಿದು ಬಂದಿದೆ. ಅಂದರೆ, ಒಂದು ತರಗತಿಯಲ್ಲಿ 30 ಮಕ್ಕಳಿದ್ದರೆ ಅವರಲ್ಲಿ ಮೂರು ಮಕ್ಕಳಿಗೆ ಈ ಸಮಸ್ಯೆಯಿರುತ್ತದೆ.

ಕಾರಣಗಳು ಮತ್ತು ಲಕ್ಷಣಗಳು :ಡಿಸ್ಲೆಕ್ಸಿಯಾವು ನರಮಂಡಲ-ನರವೈಜ್ಞಾನಿಕ ಪ್ರೇರಿತ ಅಸ್ವಸ್ಥತೆಯಾಗಿದೆ. ಮತ್ತು ಇದು ಆನುವಂಶಿಕ ಕಾರಣಗಳಿಂದ ಉಂಟಾಗಬಹುದು. ಇದು ದೈಹಿಕ ಕಾಯಿಲೆಯಲ್ಲದ ಕಾರಣ, ಮಗುವಿನ ಶಾರೀರಿಕ ಆರೋಗ್ಯದಿಂದ ಈ ಲಕ್ಷಣಗಳನ್ನು ಗುರುತಿಸಲು ಸಾಧ್ಯವಿಲ್ಲ. ಆದರೆ, ಸಾಮಾನ್ಯವಾಗಿ ಮಗು ಶಾಲೆಗೆ ಹೋಗಲು ಪ್ರಾರಂಭಿಸಿದಾಗ ರೋಗಲಕ್ಷಣಗಳನ್ನು ಗಮನಿಸಬಹುದು. ಅಲ್ಲಿ ಅವರು ಹೊಸ ಭಾಷೆ ಮತ್ತು ಇತರ ವಿಷಯಗಳನ್ನು ಕಲಿಯಲು ಪ್ರಾರಂಭಿಸಿದಾಗ ಕಲಿಕೆಯ ಅಸ್ವಸ್ಥತೆಗಳು ಬೆಳಕಿಗೆ ಬರುತ್ತದೆ.

ಡಿಸ್ಲೆಕ್ಸಿಯಾದಲ್ಲಿ ಮುಖ್ಯವಾಗಿ 3 ವಿಧಗಳಿವೆ :

ಡಿಸ್ಲೆಕ್ಸಿಯಾ : ಮಗುವಿಗೆ ಪದಗಳನ್ನು ಓದಲು ಕಷ್ಟವಾಗುತ್ತದೆ.

ಡಿಸ್ಗ್ರಾಫಿಯಾ : ಮಗುವಿಗೆ ಸರಿಯಾಗಿ ಬರೆಯಲು ಸಾಧ್ಯವಾಗುವುದಿಲ್ಲ.

ಡಿಸ್ಕಾಲ್ಕುಲಿಯಾ :ಮಗುವಿಗೆ ಗಣಿತಶಾಸ್ತ್ರದಲ್ಲಿ ತೊಂದರೆಯಿರುತ್ತದೆ.

ಡಾ. ಕೃಷ್ಣನ್ ಅವರು ಡಿಸ್ಲೆಕ್ಸಿಯಾ ಮಾನಸಿಕ ಅಸ್ವಸ್ಥತೆಯಲ್ಲ ಮತ್ತು ಈ ಸ್ಥಿತಿಯಿಂದ ಬಳಲುತ್ತಿರುವ ಮಕ್ಕಳ ಬೌದ್ಧಿಕ ಸಾಮರ್ಥ್ಯ, ಸರಾಸರಿ ಅಥವಾ ಸರಾಸರಿಗಿಂತ ಹೆಚ್ಚಾಗಿರಬಹುದು ಎಂದು ಹೇಳುತ್ತಾರೆ. ಈ ಮಕ್ಕಳು ಅತ್ಯುತ್ತಮ ವಾಗ್ಮಿಗಳಾಗಬಹುದು. ಆದರೆ, ನಿರ್ದೇಶನಗಳನ್ನು ಅರ್ಥಮಾಡಿಕೊಳ್ಳುವಲ್ಲಿ, ಅಕ್ಷರಗಳನ್ನು ಗುರುತಿಸುವಲ್ಲಿ ಮತ್ತು ಸರಿಯಾದ ವಾಕ್ಯಗಳನ್ನು ರೂಪಿಸುವಲ್ಲಿ ಮತ್ತು ಪದಗಳನ್ನು ಗುರುತಿಸುವಲ್ಲಿ ಕಷ್ಟಪಡಬಹುದು. ಅಥವಾ ಪಠ್ಯವನ್ನು ಕಂಠಪಾಠ ಮಾಡುವಲ್ಲಿಯೂ ಅವರಿಗೆ ಸಾಮಾನ್ಯವಾಗಿ ಕಷ್ಟವಾಗುತ್ತದೆ. ಇದಲ್ಲದೆ, ಡಿಸ್ಲೆಕ್ಸಿಕ್ ಮಕ್ಕಳು ಬೂಟುಗಳನ್ನು ಕಟ್ಟುವುದು, ಶರ್ಟ್ ಗುಂಡಿಗಳನ್ನು ಹಾಕಿಕೊಳ್ಳುವುದು ಮತ್ತು ಏಕಾಗ್ರತೆಯ ಅಗತ್ಯವಿರುವ ಇತರ ಕಾರ್ಯಗಳನ್ನು ನಿರ್ವಹಿಸುವಲ್ಲಿ ಸಮಸ್ಯೆಗಳನ್ನು ಹೊಂದಿರಬಹುದು.

ಮಕ್ಕಳ ಮೇಲೆ ಇದರ ಪರಿಣಾಮ :ಮಾಹಿತಿಯ ಕೊರತೆ ಮತ್ತು ರೋಗಲಕ್ಷಣಗಳನ್ನು ಗುರುತಿಸಲು ಅಸಮರ್ಥತೆಯಿಂದಾಗಿ, ಶಿಕ್ಷಕರು ಮತ್ತು ಪೋಷಕರು ಮಗು ಸರಿಯಾಗಿ ಅಧ್ಯಯನ ಮಾಡುತ್ತಿಲ್ಲ. ಏಕಾಗ್ರತೆಯಿಂದ ಅಭ್ಯಾಸ ಮಾಡುತ್ತಿಲ್ಲ. ಸೋಮಾರಿತನ ಅಥವಾ ಚೇಷ್ಟೆಯ ಕೊರತೆಯಿಂದ ಉದ್ದೇಶಪೂರ್ವಕವಾಗಿ ತಪ್ಪುಗಳನ್ನು ಮಾಡುತ್ತಿದ್ದಾರೆ ಎಂದುಕೊಳ್ಳುತ್ತಾರೆ ಎಂದು ತಜ್ಞರು ವಿವರಿಸುತ್ತಾರೆ. ಇದರ ಪರಿಣಾಮವಾಗಿ, ಅವನು/ಅವಳನ್ನು ಅನಗತ್ಯವಾಗಿ ಬೈಯಬಹುದು ಅಥವಾ ಕೆಲವೊಮ್ಮೆ ಹೊಡೆಯಬಹುದು.

ಈ ಮಕ್ಕಳು ತಮ್ಮ ವಯಸ್ಸಿನ ಇತರ ಮಕ್ಕಳಿಗಿಂತ ಸ್ವಲ್ಪ ನಿಧಾನವಾಗಿ ಅಭಿವೃದ್ಧಿ ಹೊಂದುತ್ತಾರೆ, ಇದರಿಂದಾಗಿ ಅವರ ಸ್ನೇಹಿತರು ಮತ್ತು ಸಹಪಾಠಿಗಳು ಅವರನ್ನು ಅಪಹಾಸ್ಯ ಮಾಡಬಹುದು. ಇದು ಅವರ ಆತ್ಮವಿಶ್ವಾಸದ ಮಟ್ಟದ ಇಳಿಕೆಗೆ ಕಾರಣವಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಮಗುವಿಗೆ ಅವನು / ಅವಳು ಸಮರ್ಥವಾಗಿರುವ ಕೆಲಸವನ್ನೂ ಮಾಡಲು ಸಾಧ್ಯವಾಗುವುದಿಲ್ಲ.

ಇದನ್ನು ಚಿಕಿತ್ಸೆ ನೀಡಬಹುದೇ? :ಡಿಸ್ಲೆಕ್ಸಿಯಾ ಒಂದು ಮಾನಸಿಕ ಸ್ಥಿತಿ ಮತ್ತು ಅದಕ್ಕೆ ಯಾವುದೇ ನಿರ್ದಿಷ್ಟ ಚಿಕಿತ್ಸೆ ಇಲ್ಲ. ಅದರ ರೋಗಲಕ್ಷಣಗಳನ್ನು ಗುರುತಿಸಿದ ತಕ್ಷಣ, ಪರಿಣಿತ ಮನೋವೈದ್ಯರಿಂದ ಸಲಹೆ ಪಡೆಯುವುದು ಅವಶ್ಯಕ. ಡಿಸ್ಲೆಕ್ಸಿಯಾವನ್ನು ಗುರುತಿಸಿದಾಗ ಸರಿಯಾದ ಕಲಿಕೆಯ ತಂತ್ರ ಮತ್ತು ಮಾರ್ಗದರ್ಶನದ ಮೂಲಕ ಮಗುವಿನ ಓದುವ ಮತ್ತು ಬರೆಯುವ ಸಾಮರ್ಥ್ಯವನ್ನು ಸುಧಾರಿಸಬಹುದು.

ಅಂತಹ ಮಕ್ಕಳು ತಮ್ಮ ಸ್ಥಿತಿಯನ್ನು ಸುಧಾರಿಸಲು ಮತ್ತು ಅವರಲ್ಲಿ ಆತ್ಮವಿಶ್ವಾಸವನ್ನು ತುಂಬಲು ಚಿತ್ರಕಲೆ, ಹಾಡುಗಾರಿಕೆ, ನುಡಿಸುವ ಉಪಕರಣಗಳು, ಆಟಗಳು ಅಥವಾ ಕ್ರೀಡೆಗಳು ಮತ್ತು ಇನ್ನಾವುದೇ ಚಟುವಟಿಕೆಗಳಂತಹ ಪ್ರವೀಣ ಕೆಲಸಗಳನ್ನು ಮಾಡಲು ಪ್ರೋತ್ಸಾಹಿಸಬೇಕು. ಅಂತಹ ಮಕ್ಕಳನ್ನು ನಿಭಾಯಿಸಲು, ಅವನ/ಅವಳ ಪೋಷಕರು, ಶಿಕ್ಷಕರು ಮತ್ತು ಪಾಲಕರು ತಾಳ್ಮೆ ಮತ್ತು ಉತ್ತಮ ಮನೋಭಾವವನ್ನು ಹೊಂದಿರುವುದು ಬಹಳ ಮುಖ್ಯ. ಅವರನ್ನು ಸಾಮಾನ್ಯ ಮಗುವಿನಂತೆ ನೋಡಿಕೊಳ್ಳುವುದು, ಅವರನ್ನು ಪ್ರೇರೇಪಿಸುವುದು ಮತ್ತು ಅವರ ಆತ್ಮವಿಶ್ವಾಸವನ್ನು ಹೆಚ್ಚಿಸುವುದು ಬಹಳ ಮುಖ್ಯ.

ABOUT THE AUTHOR

...view details