ನವದೆಹಲಿ: ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ (ಎಂಹೆಚ್‌ಆರ್‌ಡಿ) ದೆಹಲಿ ವಿಶ್ವವಿದ್ಯಾಲಯ ಶಿಕ್ಷಕರ ಸಂಘದ (ಡಿಯುಟಿಎ) ಪದಾಧಿಕಾರಿಗಳನ್ನು ಇಂದು ಸಂಜೆ 4 ಗಂಟೆಗೆ ಚರ್ಚೆಗೆ ಕರೆದಿದೆ.
ಡಿಯುಟಿಎ ಪ್ರತಿಭಟನೆ: ದೆಹಲಿ ವಿವಿ ಶಿಕ್ಷಕರ ಸಂಘವನ್ನು ಚರ್ಚೆಗೆ ಕರೆದ ಎಂಹೆಚ್‌ಆರ್‌ಡಿ
ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ದೆಹಲಿ ವಿಶ್ವವಿದ್ಯಾಲಯದ ಶಿಕ್ಷಕರ ಸಂಘದ ಪದಾಧಿಕಾರಿಗಳನ್ನು ಇಂದು ಚರ್ಚೆಗೆ ಕರೆದಿದೆ.
ದೆಹಲಿ ವಿಶ್ವವಿದ್ಯಾಲಯ ಆಡಳಿತವು ಡಿಯು ಶಿಕ್ಷಕರ ಸಂಘದ ಸದಸ್ಯರೊಂದಿಗೆ ಸಭೆ ನಡೆಸಿ ಪ್ರತಿಭಟನೆಯನ್ನು ನಿಲ್ಲಿಸುವಂತೆ ಮನವಿ ಮಾಡಿತ್ತು. ಆದರೆ, ತಾತ್ಕಾಲಿಕ ಶಿಕ್ಷಕರ ನೇಮಕವನ್ನು ನಿಲ್ಲಿಸುವ ಆಗಸ್ಟ್ 28 ರ ಸುತ್ತೋಲೆಯನ್ನು ಹಿಂತೆಗೆದುಕೊಳ್ಳುವಂತೆ ಡಿಯು ಶಿಕ್ಷಕರ ಸಂಘ ಒತ್ತಾಯಿಸಿದೆ. ಈ ಹಿನ್ನಲೆ ದೆಹಲಿ ವಿಶ್ವವಿದ್ಯಾಲಯ ಶಿಕ್ಷಕರ ಸಂಘ (ಡಿಯುಟಿಎ), ಡಿಯು ಉಪಕುಲಪತಿ ಕಚೇರಿಯ ಹೊರಗೆ ಪ್ರತಿಭಟನೆ ಮುಂದುವರಿಸಿದೆ.
ಈ ಹಿನ್ನಲೆ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ಡಿಯುಟಿಎ ಪದಾಧಿಕಾರಿಗಳನ್ನು ಚರ್ಚೆಗೆ ಕರೆದಿದೆ. ಇನ್ನು ಚರ್ಚೆಯು ಪರಸ್ಪರ ನಂಬಿಕೆ ಮತ್ತು ಗೌರವದ ವಾತಾವರಣದಲ್ಲಿ ನಡೆಯಲಿದೆ. ಜೊತೆಗೆ ಯಾವುದೇ ಸಂಬಂಧಿತ ವಿಷಯವನ್ನು ಚರ್ಚಿಸಲು ವಿಶ್ವವಿದ್ಯಾಲಯ ಆಡಳಿತವು ಮುಕ್ತವಾಗಿದೆ ಎಂದು ತಿಳಿಸಲಾಗಿದೆ.