ಚಿತ್ತೂರು:ತಂದೆ-ತಾಯಿಯನ್ನು ಕಳೆದುಕೊಂಡಿರುವ ಬಾಲಕಿ ತನ್ನ ಸಹೋದರ ಮತ್ತು ಸಹೋದರಿ ನೀರುಪಾಲಾಗುತ್ತಿದ್ದನ್ನು ತಪ್ಪಿಸಿ ತಾನು ಪ್ರಾಣಬಿಟ್ಟಿರುವ ಘಟನೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ನಡೆದಿದೆ.
ಗೋಪಾಲಪುರಂ ನಿವಾಸಿ 10 ವರ್ಷದ ಕೌಸಲ್ಯ ಚಿಕ್ಕ ವಯಸ್ಸಿನಲ್ಲೇ ತಂದೆ-ತಾಯಿಯನ್ನು ಕಳೆದುಕೊಂಡಿದ್ದಳು. ಬಳಿಕ ತನ್ನ ಅಜ್ಜ-ಅಜ್ಜಿಯ ಮನೆಯಲ್ಲಿದ್ದುಕೊಂಡು ಆಶ್ರಯ ಪಡೆಯುತ್ತಿದ್ದಳು. ದಸರಾ ರಜೆ ಹಿನ್ನೆಲೆ ತನ್ನ ಚಿಕ್ಕಮ್ಮನ ಮಕ್ಕಳಾದ ಮಳ್ಲೀಶ್ವರಿ (7), ಕಿರಣ್ (5) ಸಮೀಪದ ನೀರಿನ ಗುಂಡಿಯ ಬಳಿ ಆಡಲು ತೆರಳಿದ್ದಳು.
ಚಿಕ್ಕಮ್ಮನ ಮಕ್ಕಳ ಕಾಪಾಡಿ ಪ್ರಾಣಬಿಟ್ಟ ಬಾಲಕಿ ಮಳ್ಲೀಶ್ವರಿ, ಕಿರಣ್ ನೀರಿನಲ್ಲಿಳಿದು ಆಟವಾಡುತ್ತಾ ಆಳಕ್ಕೆ ಸಿಲುಕಿದ್ದರು. ಸಹೋದರ, ಸಹೋದರಿ ನೀರಿನಲ್ಲಿ ಮುಳುಗುತ್ತಿರುವುದನ್ನ ಗಮನಿಸಿದ ಕೌಶಲ್ಯ ಅವರಿಬ್ಬರನ್ನು ದಡಕ್ಕೆ ಜೋರಾಗಿ ಎಸೆದಿದ್ದಾಳೆ. ಕೌಶಲ್ಯ ಕಾಲಿಗೆ ಕೊಳಚೆ ಅಥವಾ ಕಂಟೆ ಸಿಲುಕಿಕೊಂಡಿದ್ದು, ನೀರಿನಲ್ಲೇ ಮುಳುಗಿದ್ದಾಳೆ. ಮಕ್ಕಳು ಅಳುತ್ತಿರುವುದನ್ನು ಗಮನಿಸಿದ ಸ್ಥಳೀಯರು ನೀರಿನಿಂದ ಬಾಲಕಿಯನ್ನು ಮೇಲಕ್ಕೆತ್ತಿದ್ದಾರೆ.
ಅಸ್ವಸ್ಥಗೊಂಡ ಕೌಶಲ್ಯನ್ನು ಆಸ್ಪತ್ರೆಗೆ ದಾಖಲಿಸಲು ಕರೆದೊಯ್ಯಲಾಗಿತ್ತು. ಆದ್ರೆ, ಅಷ್ಟೊತ್ತಿಗಾಗಲೇ ಕೌಶಲ್ಯ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ವೈದ್ಯರು ಆಕೆ ಸಾವನ್ನಪ್ಪಿದ್ದಾಳೆಂದು ಘೋಷಿಸಿದರು.