ನವದೆಹಲಿ: ದಸರಾ ಹಬ್ಬದ ಸಂಭ್ರಮದಲ್ಲಿರುವ ದೇಶದ ಜನತೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ಮೊದಿ ಸೇರಿ ಹಲವು ಗಣ್ಯರು ಶುಭಾಶಯ ಕೋರಿದ್ದಾರೆ.
"ರಾಷ್ಟ್ರದ ಜನತೆಗೆ ದಸರಾ ಹಬ್ಬದ ಶುಭಾಶಯಗಳು. ದೇಶದ ನಾಗರಿಕರಿಗೆ ದುರ್ಗಾ ಪೂಜೆಯ ಶುಭಾಶಯಗಳು. ಇದು ಕೆಟ್ಟದ್ದರ ಮೇಲೆ ಒಳ್ಳೆಯತನ ಜಯಿಸಿದ ಆಚರಣೆಯಾಗಿದೆ. ಈ ಹಬ್ಬವು ಎಲ್ಲರನ್ನೂ ಸಾಂಕ್ರಾಮಿಕ ಪರಿಣಾಮಗಳಿಂದ ರಕ್ಷಿಸುತ್ತದೆ ಮತ್ತು ದೇಶದ ಜನರಲ್ಲಿ ಸಮೃದ್ಧಿಯನ್ನು ತರಲಿ ಎಂದು ನಾನು ಬಯಸುತ್ತೇನೆ" ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಟ್ವೀಟ್ ಮಾಡಿದ್ದಾರೆ.
ಇತ್ತ ಪ್ರಧಾನಿ ನರೇಂದ್ರ ಮೋದಿ ಕೂಡ ಟ್ವೀಟ್ ಆಮಾಡಿದ್ದು, "ಪ್ರತಿಯೊಬ್ಬರಿಗೂ ಮಹಾ ನವಮಿಯ ಶುಭಾಶಯಗಳು. ದುರ್ಗಾ ಮಾತೆ ನಮಗೆಲ್ಲರಿಗೂ ಸಂತೋಷ, ಉತ್ತಮ ಆರೋಗ್ಯ ಮತ್ತು ಸಮೃದ್ಧಿಯನ್ನು ಒದಗಿಸಲಿ" ಎಂದು ಶುಭ ಕೋರಿದ್ದಾರೆ.
ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಕೂಡ ಟ್ವೀಟ್ ಮೂಲಕ ಶುಭ ಕೋರಿದ್ದು, "ದುರ್ಗಾ ಪೂಜೆಯ ಶುಭಾಶಯಗಳು, ದುರ್ಗಾ ದೇವಿಯು ನಮ್ಮೆಲ್ಲರನ್ನು ಆಶೀರ್ವದಿಸಲಿ. ಕೆಟ್ಟದ್ದರ ಮೇಲಿನ ಒಳ್ಳೆಯ ವಿಜಯವನ್ನು ನಾವು ಆಚರಿಸುತ್ತಿದ್ದಂತೆ, ಸಮಾಜದ ದುಷ್ಕೃತ್ಯಗಳನ್ನು ನಿರ್ಮೂಲನೆ ಮಾಡಲು ಮತ್ತು ನಮ್ಮ ಸುತ್ತಮುತ್ತಲಿನ ಪ್ರದೇಶಗಳನ್ನು ಸುರಕ್ಷಿತ, ಆರೋಗ್ಯಕರ ಮತ್ತು ಸಮೃದ್ಧವಾಗಿಸಲು ನಾವು ನಿರ್ಧರಿಸೋಣ" ಎಂದಿದ್ದಾರೆ.