ಲಖನೌ:ಇಂದು ಬೆಳಗ್ಗೆ ಯುವಕನೋರ್ವನನ್ನು ಕೆಲ ದುಷ್ಕರ್ಮಿಗಳ ತಂಡ ಗುಂಡು ಹಾರಿಸಿ ಕೊಲೆ ಮಾಡಿರುವ ಘಟನೆ ಬರೌಲಿಯಲ್ಲಿ ನಡೆದಿದೆ. ಇನ್ನು ಕೊಲೆ ಮಾಡುವ ಮುನ್ನ ಆತನಿಗೆ ಥಳಿಸಿದ್ದು, ಅದರ ವಿಡಿಯೋ ಮಾಡಿದ್ದಾರೆ.
ದುರ್ಗೇಶ್ ಯಾದವ್ ಎಂಬ ವ್ಯಕ್ತಿಯನ್ನು ಮನೀಶ್ ಯಾದವ್ ಮತ್ತು ಅವರ ಕೆಲವು ಸಹಚರರು ಗುಂಡಿಕ್ಕಿ ಕೊಂದಿದ್ದು, ಚಿಕಿತ್ಸೆಯ ಸಮಯದಲ್ಲಿ ದುರ್ಗೇಶ್ ಯಾದವ್ ಮೃತಪಟ್ಟಿದ್ದಾನೆ.
ಯುವಕನಿಗೆ ಥಳಿಸಿದ ದುಷ್ಕರ್ಮಿಗಳು ಘಟನೆ ಸಂಬಂಧ ಪೊಲೀಸರು ಎಫ್ಐಆರ್ ದಾಖಲಿಸಿದ್ದು, ತನಿಖೆ ಕೈಗೊಂಡಿದ್ದಾರೆ. ದುರ್ಗೇಶ್ ಯಾದವ್ ಗೋರಖ್‌ಪುರದ ನಿವಾಸಿಯಾಗಿದ್ದು, ಈತನ ಹೆಸರು ರೌಡಿಶೀಟ್ನಲ್ಲಿತ್ತು. ಇನ್ನು ದುರ್ಗೇಶ್ಗೆ ಮನೀಶ್ ಯಾದವ್ ಮತ್ತು ಅವರ ಸಹಚರರೊಂದಿಗೆ ಹಣದ ವ್ಯವಹಾರದಲ್ಲಿ ಘರ್ಷಣೆ ನಡೆದಿತ್ತು. ಇದೇ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ನಡೆದಿದೆ ಎಂದು ಅನುಮಾನ ವ್ಯಕ್ತವಾಗಿದೆ.
ದುರ್ಗೇಶ್ ಯಾದವ್ ಹತ್ಯೆಗೆ ಮುನ್ನ ವಿಡಿಯೋ ಮಾಡಲಾಗಿದ್ದು, ಇದರಲ್ಲಿ ಮನೀಶ್ ಯಾದವ್ ಮತ್ತು ಆತನ ಸಹಚರರು ದುರ್ಗೇಶ್ ಯಾದವ್ನನ್ನು ಅಮಾನುಷವಾಗಿ ಥಳಿಸಿದ್ದಾರೆ.