ಕರ್ನಾಟಕ

karnataka

ETV Bharat / bharat

ಧರೆಗಿಳಿದ ಚಂದ್ರಯಾನ-2  ದುರ್ಗಾ ಮಂಟಪದಲ್ಲಿ ದೇವಿ ಅಧ್ಯಯನ .!

ವಾರಣಾಸಿಯಲ್ಲಿ ದುರ್ಗಾ ಪೂಜೆಗಾಗಿ ನಿರ್ಮಾಣ ಮಾಡಿರುವ ಮಂಟಪವನ್ನ ಚಂದ್ರಯಾನ-2 ಮಾದರಿಯಲ್ಲಿ ನಿರ್ಮಿಸಲಾಗಿದೆ.

ಚಂದ್ರಯಾನ-2 ಮಾದರಿ

By

Published : Oct 5, 2019, 8:23 AM IST

ವಾರಣಾಸಿ(ಉತ್ತರ ಪ್ರದೇಶ):ನವರಾತ್ರಿ ಉತ್ಸವದ ನಿಮಿತ್ತ ನಡೆಯುವ ದುರ್ಗಾ ಪೂಜೆಗಾಗಿ ನಿರ್ಮಾಣ ಮಾಡಿರುವ ಮಂಟಪವನ್ನ ಚಂದ್ರಯಾನ-2 ಮಿಷನ್ ಉದ್ದೇಶವಾಗಿ ಇರಿಸಿಕೊಂಡು ನಿರ್ಮಾಣ ಮಾಡಲಾಗಿದೆ.

ವಾರಣಾಸಿಯಲ್ಲಿ ಇಂತಾಹದ್ದೊಂದು ಮಂಟಪವನ್ನ ನಿರ್ಮಾಣ ಮಾಡಲಾಗಿದ್ದು, ಇಸ್ರೋ ಅಧ್ಯಕ್ಷ ಕೆ.ಶಿವನ್​, ಗಗನಯಾತ್ರಿಗಳನ್ನ ಹೋಲುವ ಮಾದರಿಗಳನ್ನೂ ನಿರ್ಮಾಣ ಮಾಡಲಾಗಿದೆ. ಈ ಬಗ್ಗೆ ಮಾಯನಾಡಿರುವ ಪೂಜಾ ಸಮಿತಿ ಅಧ್ಯಕ್ಷ ರಾಜೇಶ್​ ಜೈಸ್ವಾಲ್, ನಾವು ಇಸ್ರೋದ ಮಾನವಸಹಿತ ಬಾಹ್ಯಾಕಾಶ ಕಾರ್ಯಾಚರಣೆಯನ್ನು ಚಿತ್ರಿಸಲು ಬಯಸಿದ್ದೇವೆ. ಹೀಗಾಗಿ ಗಗನಯಾತ್ರಿಗಳ ಮಾದರಿಗಳನ್ನು ಸಹ ನಿರ್ಮಿಸಿದ್ದೇವೆ ಎಂದಿದ್ದಾರೆ.

ಇಸ್ರೋದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದ ಚಂದ್ರಯಾನ-2ನ ವಿಕ್ರಂ ಲ್ಯಾಡಂರ್ ಯಶಸ್ವಿಯಾಗಿ ಚಂದ್ರನ ಮೇಲೆ ಸರಿಯಾದ ರೀತಿ ಇಳಿಯಲಿಲ್ಲವಾದರೂ ಇಸ್ರೋ ಸಾಧನೆಯನ್ನ ಇಡೀ ದೇಶವೇ ಕೊಂಡಾಡಿತ್ತು.

ABOUT THE AUTHOR

...view details