ನವದೆಹಲಿ:ಪ್ರಧಾನಿ ಮೋದಿ ಭಾಷಣದ ಹಿನ್ನೆಲೆಯಲ್ಲಿ ರಾಜ್ಯದ 294 ವಿಧಾನಸಭಾ ಕ್ಷೇತ್ರಾದ್ಯಂತ ಪ್ರತಿ ಮತಗಟ್ಟೆಯಲ್ಲಿ ನೇರಪ್ರಸಾರಕ್ಕೆ ಬಿಜೆಪಿ ವ್ಯವಸ್ಥೆ ಮಾಡಿದೆ.
ವಿಡಿಯೋ ಸಂವಾದದ ಮೂಲಕವೇ 10 ಪೂಜಾ ಪೆಂಡಾಲ್‌ಗಳನ್ನು ಪ್ರಧಾನಿ ಉದ್ಘಾಟಿಸಲಿದ್ದಾರೆ.
ಬಿಜೆಪಿ ಮೂಲಗಳ ಪ್ರಕಾರ, ಮೊದಲು ಪಂಜಾಬಿ ಧೋತಿ ಧರಿಸಲಿರುವ ಪಿಎಂ ತಮ್ಮ ನಿವಾಸದಿಂದ ದುರ್ಗಾ ಮಾತೆಗೆ ನಮನ ಸಲ್ಲಿಸುತ್ತಾರೆ. ಈ ಶುಭ ಸಂದರ್ಭದಲ್ಲಿ ಪೂಜಾ ಆಚರಣೆಗಳು ಪ್ರಾರಂಭವಾಗುವುದರಿಂದ ರಾಜ್ಯದ ಜನರಿಗೆ ಅವರು ಶುಭ ಕೋರಲಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಮೋದಿ, ದುರ್ಗಾ ಪೂಜೆಯ ಶುಭ ದಿನದಂದು ರಾಜ್ಯದ ಜನರಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಶುಭಾಶಯ ತಿಳಿಸಲು ಬಯಸುತ್ತೇನೆ ಎಂದಿದ್ದಾರೆ.
ಇದು ದುಷ್ಟರ ವಿರುದ್ಧ ಜಯ ಸಾಧಿಸಿದ ಸಂಭ್ರಮದ ದಿನ. ಶಕ್ತಿ, ಸಂತೋಷ ಮತ್ತು ಉತ್ತಮ ಆರೋಗ್ಯವನ್ನು ಕರುಣಿಸುವಂತೆ ಮಾತೆಯನ್ನು ಪ್ರಾರ್ಥಿಸುತ್ತೇವೆ ಎಂದು ಅವರು ತಿಳಿಸಿದ್ದಾರೆ.
ರಾಜ್ಯಾದ್ಯಂತ ಒಂದು ಕೇಂದ್ರದಲ್ಲಿ 25ಕ್ಕೂ ಹೆಚ್ಚು ಕಾರ್ಯಕರ್ತರು ಮತ್ತು ಮತದಾರರಿಗೆ ಹಾಗು 78,000 ಕ್ಕೂ ಹೆಚ್ಚು ಮತದಾನ ಕೇಂದ್ರಗಳಲ್ಲಿ ವಿಡಿಯೋ ಕಾನ್ಫರೆನ್ಸ್ ಭಾಷಣವನ್ನು ವೀಕ್ಷಿಸಲು ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.