ತ್ರಿಪುರ: ಹಿಂದೂಗಳ ಪವಿತ್ರ ಹಬ್ಬ ದಸರಾ. ಈ ಹತ್ತೂ ದಿನಗಳು ಹಿಂದೂಗಳ ಪಾಲಿಗೆ ಪ್ರಮುಖವಾದವು. ದಿನಾ ದೇವಿಗೆ ಅಲಂಕಾರ ಮಾಡಿ, ಪೂಜೆ ಸಲ್ಲಿಸುವುದೇ ಖುಷಿ. ಆದ್ರೆ, ತ್ರಿಪುರದ ಅಗರ್ತಲಾದಲ್ಲಿ ಮುಸ್ಲಿಂ ಸಮುದಾಯದ ವ್ಯಕ್ತಿಯೊಬ್ಬ ಪ್ರತಿ ವರ್ಷ ದುರ್ಗ ಪೂಜೆ ಆಯೋಜಿಸಿ ಸಂಭ್ರಮಿಸುತ್ತಾರೆ.
19 ವರ್ಷಗಳಿಂದ ದೇವಿಗೆ ಪೂಜೆ ಸಲ್ಲಿಸುತ್ತಿರುವ ಮುಸ್ಲಿಂ ಸಮುದಾಯ - ಮುಸ್ಲಿಂ ಸಮುದಾಯದಿಂದ ದೇವಿ ಪ್ರತಿಷ್ಠಾಪಿಸಿ ಪೂಜೆ
ತ್ರಿಪುರದ ಅಗರ್ತಾಲದಲ್ಲಿ 19 ವರ್ಷಗಳಿಂದ ಮುಸ್ಲಿಂ ಸಮುದಾಯವೊಂದು ದೇವಿ ಪ್ರತಿಷ್ಠಾಪಿಸಿ ದಸರಾವನ್ನು ಆಚರಿಸುತ್ತಾರೆ.
ದೇವಿ ಪ್ರತಿಷ್ಠಾಪಿಸಿ ಮುಸ್ಲಿಂ ಸಮುದಾಯದಿಂದ ವಿಶೇಷ ಪೂಜೆ
ಹೌದು, ತ್ರಿಪುರದ ಅಗರ್ತಾಲಾ ಪುರಸಭೆ ಪ್ರದೇಶದಲ್ಲಿ ಮುಸ್ಲಿಂ ಸಮುದಾಯ ದೇವಿ ಪ್ರತಿಷ್ಠಾಪಿಸಿ, ಪೂಜೆ ಸಲ್ಲಿಸುತ್ತಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಪೂಜಾ ಸಮಿತಿ ಅಧ್ಯಕ್ಷ, ಧರ್ಮವು ವೈಯಕ್ತಿಕ ವ್ಯವಹಾರ. ಹಬ್ಬಗಳು ಸಾಮಾಜಿಕ ಕಾಳಜಿಯ ವಿಷಯಗಳಾಗಿವೆ. ಸುಮಾರು 19 ವರ್ಷಗಳಿಂದ ನಾವು ದೇವಿಯನ್ನು ಪ್ರತಿಷ್ಠಾಪಿಸುತ್ತಿದ್ದೇವೆ. ನಮಗೆ ಹಿಂದೂ, ಮುಸ್ಲೀಂ ಎಂಬ ಬೇಧ, ಭಾವವಿಲ್ಲದೆ ಸಾಮರಸ್ಯದಿಂದ ಬದುಕು ಸಾಗಿಸುತ್ತಿದ್ದೇವೆ ಎಂದರು.
ಮುಸ್ಲಿಂ ಸಮುದಾಯದ ಎಲ್ಲರೂ ಕಟ್ಟುನಿಟ್ಟಿನ ಕ್ರಮ ಪಾಲಿಸಿ ಪೂಜೆಯಲ್ಲಿ ಭಾಗಿಯಾಗಿ ದೇವಿಯ ಆಶೀರ್ವಾದ ಪಡೆಯುತ್ತಾರೆ.