ದೆಹಲಿ:2012 ರ ದೆಹಲಿ ನಿರ್ಭಯಾ ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿಗಳ ಮರಣದಂಡನೆ ರಿಹರ್ಸಲ್ ಇಂದು ತಿಹಾರ್ ಜೈಲಿನಲ್ಲಿ ನಡೆಸಲಾಯಿತು ಎಂದು ಜೈಲಿನ ಅಧಿಕಾರಿ ತಿಳಿಸಿದ್ದಾರೆ.
ನಿರ್ಭಯಾ ಪ್ರಕರಣದ ಆರೋಪಿಗಳ ಮರಣದಂಡನೆ ರಿಹರ್ಸಲ್, ಆರೋಪಿಗಳ ಬದಲು ಕಲ್ಲು ತುಂಬಿದ ಚೀಲ - ದೆಹಲಿ ನಿರ್ಭಯಾ ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿಗಳ ಡಮ್ಮಿ ಮರಣದಂಡನೆ
2012 ರ ದೆಹಲಿ ನಿರ್ಭಯಾ ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿಗಳ ಮರಣದಂಡನೆ ರಿಹರ್ಸಲ್ ಇಂದು ತಿಹಾರ್ ಜೈಲಿನಲ್ಲಿ ನಡೆಸಲಾಯಿತು ಎಂದು ಜೈಲಿನ ಅಧಿಕಾರಿ ತಿಳಿಸಿದ್ದಾರೆ.

ತಿಹಾರ್ ಜೈಲಿ ನಡೆದ ನಿರ್ಭಯಾ ಪ್ರಕರಣದ ಆರೋಪಿಗಳ ಡಮ್ಮಿ ಮರಣದಂಡನೆ
ಅಪರಾಧಿಗಳ ತೂಕಕ್ಕೆ ಅನುಗುಣವಾಗಿ ಕಲ್ಲುಗಳಿಂದ ತುಂಬಿದ ಚೀಲಗಳನ್ನು ಹಗ್ಗ ಬಿಗಿದು ಕಟ್ಟಿ ತೂಕ ತಡೆಯುತ್ತದೆಯೇ ಎಂದು ಪರೀಕ್ಷಿಸಲಾಯಿತು. ಈ ವೇಳೆ ವಧಾಕಾರನನ್ನು ಕರೆಯಲಿಲ್ಲ ಬದಲಾಗಿ ಜೈಲಿನ ಅಧಿಕಾರಿಯೊಬ್ಬರು ಅದನ್ನು ನಿರ್ವಹಿಸಿದರು.
ದೆಹಲಿಯಲ್ಲಿ ನಡೆದಿದ್ದ ನಿರ್ಭಯಾ ಅತ್ಯಾಚಾರ ಪ್ರಕರಣದಲ್ಲಿ ದೆಹಲಿ ಕೋರ್ಟ್ ಜನವರಿ 22ರಂದು ಬೆಳಗ್ಗೆ 7 ಗಂಟೆಗೆ ಅಪರಾಧಿಗಳಿಗೆ ಗಲ್ಲುಶಿಕ್ಷೆಗೆ ಮುಹೂರ್ತ ಫಿಕ್ಸ್ ಮಾಡಿದೆ. ಈ ಹಿನ್ನೆಲೆ ಇಂದು ತಿಹಾರ್ ಜೈಲಿನಲ್ಲಿ ಈ ಪರೀಕ್ಷೆ ಕೈಗೊಳ್ಳಲಾಯಿತು.