ಕರ್ನಾಟಕ

karnataka

ETV Bharat / bharat

ಕುಡಿದ ಅಮಲಿನಲ್ಲಿ ಜೀವಂತ ನಾಗರ ಹಾವು ಕಚ್ಚಿ ಕಚ್ಚಿ ತುಂಡರಿಸಿದ ವ್ಯಕ್ತಿ! - ಆಸ್ಪತ್ರೆಗೆ ದಾಖಲು

ಕುಡಿದ ಅಮಲಿನಲ್ಲಿ ಜೀವಂತ ನಾಗರ ಹಾವು ಕಚ್ಚಿ ತುಂಡರಿಸಿದ ಘಟನೆ ಉತ್ತರ ಪ್ರದೇಶದ ಇಟಾ ನಗರದಲ್ಲಿ ನಡೆದಿದೆ.

ನಾಗರ ಹಾವು ಕಚ್ಚಿ ಕಚ್ಚಿ ತುಂಡರಿಸಿದ ವ್ಯಕ್ತಿ

By

Published : Jul 29, 2019, 4:25 PM IST

ಇಟಾ(ಉತ್ತರಪ್ರದೇಶ): ಕುಡಿದ ಮತ್ತಿನಲ್ಲಿ ವ್ಯಕ್ತಿಯೋರ್ವ ಜೀವಂತ ಹಾವು ಕಡಿದು ತುಂಡು ತುಂಡಾಗಿಸಿರುವ ಘಟನೆ ಉತ್ತರಪ್ರದೇಶದ ಇಟಾದಲ್ಲಿ ರವಿವಾರ ರಾತ್ರಿ ನಡೆದಿದ್ದು, ವ್ಯಕ್ತಿ ಇದೀಗ ಆಸ್ಪತ್ರೆಗೆ ದಾಖಲಾಗಿ ಜೀವನ್ಮರಣದ ಮಧ್ಯೆ ಹೋರಾಟ ನಡೆಸುತ್ತಿದ್ದಾನೆ.

ಮನೆಗೆ ನುಗ್ಗಿರುವ ಹಾವು ನೋಡಿರುವ ವ್ಯಕ್ತಿ ಅದನ್ನ ಹೊರಹಾಕಲು ಮುಂದಾಗಿದ್ದಾನೆ. ಈ ವೇಳೆ, ಹಾವು ಆತನಿಗೆ ಕಚ್ಚಿದೆ. ತಕ್ಷಣ ಅದನ್ನ ಕೈಯಲ್ಲಿ ಹಿಡಿದುಕೊಂಡಿರುವ ವ್ಯಕ್ತಿ ಹಲ್ಲಿನಿಂದ ಕಚ್ಚಿ ಕಚ್ಚಿ ತುಂಡರಿಸಿದ್ದಾನೆ. ಇದನ್ನ ವೀಕ್ಷಣೆ ಮಾಡಿರುವ ಸ್ಥಳೀಯರು ಆತನನ್ನ ತಕ್ಷಣ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ವೈದ್ಯರು ತಿಳಿಸಿರುವ ಪ್ರಕಾರ ಆತನ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ ಎಂದು ತಿಳಿಸಿದ್ದಾರೆ.

ಹಾವು ಕಚ್ಚಿಸಿಕೊಂಡಿರುವ ಯುವಕನ ತಂದೆ ತಿಳಿಸಿರುವ ಪ್ರಕಾರ, ಹಾವೊಂದು ಮನೆಯೊಳಗೆ ನುಗ್ಗಿದ್ದ ವೇಳೆ, ಅದನ್ನ ಹೊರಹಾಕಲು ಆತ ಮುಂದಾಗಿದ್ದ. ಈ ವೇಳೆ ಅದು ಕಚ್ಚಿದ್ದು, ತಕ್ಷಣವೇ ಆತ ಕೈಯಲ್ಲಿ ಹಿಡಿದುಕೊಂಡು ಕಚ್ಚಿ ತುಂಡರಿಸಿದ್ದಾನೆ ಎಂದು ತಿಳಿಸಿದ್ದಾರೆ. ಇನ್ನು ತುಂಡು ತುಂಡಾಗಿಸಿದ್ದ ಹಾವಿನ ಅತ್ಯಸಂಸ್ಕಾರವನ್ನ ಗ್ರಾಮಸ್ಥರೇ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ABOUT THE AUTHOR

...view details