ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿಗೆ ಸಂಬಂಧಿಸಿದ ಡ್ರಗ್ಸ್ ಪ್ರಕರಣದಲ್ಲಿ ನಟಿಯರಾದ ದೀಪಿಕಾ ಪಡುಕೋಣೆ ಮತ್ತು ರಕುಲ್ ಪ್ರೀತ್ಸಿಂಗ್ ಸೇರಿದಂತೆ ಕೆಲ ಬಾಲಿವುಡ್ ನಟಿಯರಿಗೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ಸಮನ್ಸ್ ಜಾರಿಗೊಳಿಸಿತ್ತು.
ಎನ್‌ಸಿಬಿ ಕಚೇರಿಗೆ ಗಿಲ್ಲಿ ನಟಿ ಜೊತೆ ದೀಪಿಕಾ ಮ್ಯಾನೇಜರ್ ಹಾಜರ್ ಎನ್‌ಸಿಬಿ ವಿಚಾರಣೆಗೆಂದು ರಕುಲ್ ಪ್ರೀತ್ಸಿಂಗ್ ಮುಂಬೈನಲ್ಲಿರುವ ನಿವಾಸದಿಂದ ಎನ್‌ಸಿಬಿ ಕಚೇರಿಗೆ ತೆರೆಳಿದ್ದಾರೆ.
ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ನೀಡಿದ (NCB) ಸಮನ್ಸ್ ಜಾರಿಯಿಂದ ವಿಚಲಿತರಾಗಿರುವ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಶನಿವಾರ ತನಿಖಾಧಿಕಾರಿಗಳ ಮುಂದೆ ಹಾಜರಾಗಲಿದ್ದು, ಸದ್ಯ ದೀಪಿಕಾ ಮ್ಯಾನೇಜರ್ ಕರಿಷ್ಮಾ ಪ್ರಕಾಶ್ ಎನ್‌ಸಿಬಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಿದ್ದಾರೆ.
ದೀಪಿಕಾ ತನ್ನ ಮ್ಯಾನೇಜರ್ ಕರಿಷ್ಮಾ ಪ್ರಕಾಶ್ ಜೊತೆ ಮಾಡಿದ ನಿಷೇಧಿತ ವಸ್ತುಗಳ ಬಗೆಗಿನ ವಾಟ್ಸ್ಆ್ಯಪ್ ಚಾಟ್ಗಳು ಸಿಕ್ಕಿದ್ದರಿಂದ ಎನ್‌ಸಿಬಿ ಅಧಿಕಾರಿಗಳು ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ.