ಮುಂಬೈ:ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಡ್ರಗ್ಸ್ ಪ್ರಕರಣದಲ್ಲಿ ರಿಯಾ ಚಕ್ರವರ್ತಿಯನ್ನು ಎನ್ಸಿಬಿ ಅಧಿಕಾರಿಗಳು ದಕ್ಷಿಣ ಮುಂಬೈನಲ್ಲಿರುವ ಬೈಕುಲ ಕಾರಾಗೃಹಕ್ಕೆ ಕರೆ ತಂದಿದ್ದಾರೆ.
ಸತತ ಮೂರು ದಿನಗಳ ವಿಚಾರಣೆ ಬಳಿಕ ರಿಯಾ ಚಕ್ರವರ್ತಿಯನ್ನು ಪೊಲೀಸರು ಬಂಧಿಸಿದ್ದು, ಸ್ಥಳೀಯ ನ್ಯಾಯಾಲಯದ ಆದೇಶದಂತೆ ಸೆಪ್ಟೆಂಬರ್ 22ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.
ಇದಕ್ಕೂ ಮೊದಲು ರಿಯಾ ಚಕ್ರವರ್ತಿಯ ವಕೀಲರಾದ ಸತೀಶ್ ಮಾನೆಶಿಂಧೆ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕೃತಗೊಂಡಿತ್ತು. ಜಾಮೀನು ನೀಡಲು ಎನ್ಸಿಬಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಮಾತ್ರವಲ್ಲದೆ ರಿಯಾ ಡ್ರಗ್ಸ್ ಗುಂಪಿನಲ್ಲಿ ಸಕ್ರಿಯರಾಗಿದ್ದಾರೆ ಎಂದು ಆರೋಪಿಸಿತ್ತು.
ರಿಯಾ ಚಕ್ರವರ್ತಿ ಜೊತೆಗೆ ಆಕೆಯ ಸಹೋದರ ಶೋವಿಕ್ ಚಕ್ರವರ್ತಿಯನ್ನು ಹಾಗೂ ಮತ್ತೋರ್ವ ವ್ಯಕ್ತಿಯನ್ನು ಎನ್ಸಿಬಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.
ಈಗ ಮತ್ತೊಮ್ಮೆ ವಕೀಲ ಸತೀಶ್ ಮಾನೆಶಿಂಧೆ ಸೆಶೆನ್ಸ್ ಕೋರ್ಟ್ನಲ್ಲಿ 11 ಗಂಟೆಗೆ ಜಾಮೀನಿಗೆ ಅರ್ಜಿ ಸಲ್ಲಿಸಿದ್ದು, ವಿಚಾರಣೆ ನಡೆಯಲಿದೆ.