ಹೈದರಾಬಾದ್: ಕೋವಿಡ್-19 ಚಿಕಿತ್ಸೆಗಾಗಿ ಹೆಟೆರೊ ಕಂಪನಿಯು ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಯಿಂದ ರೆಮ್‌ಡೆಸಿವಿರ್ ಉತ್ಪಾದನೆ ಮತ್ತು ಮಾರುಕಟ್ಟೆ ಅನುಮೋದನೆಯನ್ನು ಪಡೆದಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಕಂಪನಿಯ ಜೆನರಿಕ್ ಆವೃತ್ತಿಯ ರೆಮ್‌ಡೆಸಿವಿರ್ ಅನ್ನು ಭಾರತದಲ್ಲಿ 'ಕೋವಿಫೋರ್' ಬ್ರಾಂಡ್ ಹೆಸರಿನಲ್ಲಿ ಮಾರಾಟ ಮಾಡಲಾಗುವುದು. ವಯಸ್ಕರು ಮತ್ತು ಮಕ್ಕಳಲ್ಲಿ, ಕೊರೊನಾ ಶಂಕಿತ ಅಥವಾ ಪ್ರಯೋಗಾಲಯ ದೃಢಪಡಿಸಿದ ಪ್ರಕರಣಗಳ ಚಿಕಿತ್ಸೆಗಾಗಿ ಔಷಧಿಯನ್ನು ಬಳಸಲು ಡಿಸಿಜಿಐ ಅನುಮೋದನೆ ನೀಡಿದೆ.