ಚೆನೈ/ರಾಯ್ಪುರ್: ಛತ್ತೀಸ್ಘಡ ರಾಜಧಾನಿ ಮತ್ತು ಸುತ್ತಮುತ್ತಲಿನ ನಗರಗಳಲ್ಲಿ ಕೊರೊನಾ ವೈರಸ್ ಹರಡದಂತೆ ತಡೆಗಟ್ಟಲು ಚೆನ್ನೈ ಮೂಲದ ಡ್ರೋನ್ ಕಂಪನಿಯೊಂದು ಹೊಸ ತಾಂತ್ರಿಕ ಆವಿಷ್ಕಾರಗಳನ್ನು ಬಳಸಿಕೊಂಡು ಕೊರೊನಾ ನಿಯಂತ್ರಣಕ್ಕೆ ಔಷಧಿ ಸಿಂಪಡಿಸಲು ಸಿದ್ಧತೆ ನಡೆಸಿದೆ.
ಕೊರೊನಾ ವಿರುದ್ಧ ಹೋರಾಟಕ್ಕೆ ಸಿದ್ಧವಾಯ್ತು ಡ್ರೋನ್! - ಚತ್ತಿಸ್ಘಡ ಕೊರೊನಾ ಸುದ್ದಿ
ಛತ್ತೀಸ್ಘಡ ರಾಜಧಾನಿ ರಾಯ್‌ಪುರ ಮತ್ತು ಇತರೆಡೆಗಳಲ್ಲಿ ಕೊರೊನಾ ನಿಭಾಯಿಸಲು ಚೆನ್ನೈ ಮೂಲದ ಡ್ರೋನ್ ಕಂಪನಿಯೊಂದರ ನೆರವು ಪಡೆಯಲು ಅಲ್ಲಿನ ಸರ್ಕಾರ ನಿರ್ಧರಿಸಿದೆ.

ಡ್ರೋನ್
ಈ ಸಂಬಂಧ ಮಾಧ್ಯಮಗಳಿಗೆ ಪ್ರಿತಿಕ್ರಿಯೆ ನೀಡಿರುವ ಗರುಡ ಏರೋಸ್ಪೇಸ್‌ನ ವ್ಯವಸ್ಥಾಪಕ ನಿರ್ದೇಶಕ ಅಗ್ನೀಶ್ವರ್ ಜಯಪ್ರಕಾಶ್, ನಮ್ಮ ಡ್ರೋನ್‌ಗಳು ಛತ್ತೀಸ್ಘಡ ಸರ್ಕಾರ ನಿರ್ದಿಷ್ಟಪಡಿಸಿದ ಪ್ರದೇಶಗಳಾದ, ಆಸ್ಪತ್ರೆ ಪ್ರದೇಶಗಳು, ಸರ್ಕಾರಿ ಕಚೇರಿಗಳು ಮತ್ತು ಕಟ್ಟಡಗಳ ಮೇಲೆ ಕೊರೊನಾ ಸೋಂಕು ನಿವಾರಕ ದ್ರಾವಣವನ್ನು ಸಿಂಪಡಿಸುತ್ತವೆ ಎಂದು ತಿಳಿಸಿದ್ದಾರೆ.