ಕೊಯಮತ್ತೂರು (ತಮಿಳುನಾಡು):ಶಾರ್ಜಾದಿಂದ ಕೊಯಮತ್ತೂರಿಗೆ ಪ್ರಯಾಣಿಸುತ್ತಿದ್ದ ಆರು ಪ್ರಯಾಣಿಕರ ಬಳಿಯಿಂದ 3.6 ಕೋಟಿ ರೂ. ಮೌಲ್ಯದ 6.88 ಕೆಜಿ ಚಿನ್ನವನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಕೊಯಮತ್ತೂರಿನಲ್ಲಿ ಆರು ಪ್ರಯಾಣಿಕರಿಂದ 7 ಕೆಜಿ ಚಿನ್ನ ವಶಪಡಿಸಿಕೊಂಡ ಡಿಆರ್‌ಐ! - ಕೊಯಮತ್ತೂರು ಡಿಆರ್‌ಐ
ಕೊಯಮತ್ತೂರಿನಲ್ಲಿ ಆರು ಪ್ರಯಾಣಿಕರಿಂದ 7 ಕೆಜಿ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಡಿಆರ್‌ಐ ತಿಳಿಸಿದೆ. ಅವರು ಶಾರ್ಜಾದಿಂದ ಕೊಯಮತ್ತೂರಿಗೆ ಪ್ರಯಾಣಿಸುತ್ತಿದ್ದರು.
gold
"ಅಕ್ಟೋಬರ್ 2ರಂದು ಶಾರ್ಜಾದಿಂದ ಕೊಯಮತ್ತೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಆರು ಪ್ರಯಾಣಿಕರನ್ನು ಡಿಆರ್‌ಐ ತಡೆಹಿಡಿದು ಪೇಸ್ಟ್ ರೂಪದಲ್ಲಿದ್ದ ಚಿನ್ನವನ್ನು (ಸುಮಾರು 3.6 ಕೋಟಿ ರೂ. ಮೌಲ್ಯದ ಅಂದಾಜು 6.88 ಕೆಜಿ ಚಿನ್ನ) ವಶಪಡಿಸಿಕೊಂಡಿದೆ" ಎಂದು ಡಿಆರ್‌ಐ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.