ನವದೆಹಲಿ:ಕರ್ತವ್ಯ ನಿರತರಾಗಿರುವ ಪೊಲೀಸರು ಇನ್ನು ಮುಂದೆ ಜೀನ್ಸ್, ಟೀ-ಶರ್ಟ್, ಆ್ಯಕ್ಷನ್ ಶೂಗಳನ್ನು ಧರಿಸುವಂತಿಲ್ಲ. ಹಾಗೊಮ್ಮೆ ಕಂಡುಬಂದ್ರೆ ಶಿಸ್ತು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲಾಗಿದೆ.
ಆರಕ್ಷಕರಿಗೂ ಡ್ರೆಸ್ ಕೋಡ್: ಜೀನ್ಸ್, ಟೀ-ಶರ್ಟ್ ಧರಿಸಿದ್ರೆ ಗಂಭೀರ ಕ್ರಮ - news kannada
ಪೊಲೀಸರು ಕರ್ತವ್ಯ ವೇಳೆ ಜೀನ್ಸ್, ಟೀ-ಶರ್ಟ್ಗಳನ್ನು ಧರಿಸಬಾರದೆಂದು ದೆಹಲಿ ಡಿಸಿಪಿ ಕಚೇರಿಯಿಂದ ಸೂಚನೆಯೊಂದು ಹೊರಬಿದ್ದಿದೆ. ಆಯಾ ಪೊಲೀಸ್ ಇಲಾಖೆಗೆ ಈ ಬಗ್ಗೆ ಪತ್ರ ಬರೆದಿರುವ ಡಿಸಿಪಿ ಅನಂತ್ ಮಿತ್ತಲ್ ಫಾರ್ಮಲ್ ಬಟ್ಟೆಗಳನ್ನಷ್ಟೇ ಧರಿಸಬೇಕೆಂದು ತಿಳಿಸಿದ್ದಾರೆ.
ಆರಕ್ಷಕರಿಗೂ ಡ್ರೆಸ್ ಕೋಡ್
ದೆಹಲಿ ಡಿಸಿಪಿ ಕಚೇರಿಯಿಂದ ಹೊರಬಿದ್ದಿರುವ ಸೂಚನೆ ಇದಾಗಿದ್ದು, ಇನ್ನುಮುಂದೆ ರಾಜಧಾನಿಯಲ್ಲಿ ಪೊಲೀಸರು ಕರ್ತವ್ಯ ನಿರತರಾಗಿರುವ ವೇಳೆ ಫಾರ್ಮಲ್ ಬಟ್ಟೆಗಳನ್ನಷ್ಟೇ ಧರಿಸಬೇಕಂತೆ. ಈ ಡ್ರೆಸ್ಕೋಡ್ ಪುರುಷ ಸಿಬ್ಬಂದಿಗೆ ಮಾತ್ರ ಸೀಮಿತವಲ್ಲ. ಮಹಿಳಾ ಪೊಲೀಸರಾದರೆ ಸೀರೆ, ಸಲ್ವಾರ್, ಸೂಟ್, ಶರ್ಟ್ಗಳನ್ನು ಧರಿಸುವ ಅವಕಾಶವಿದೆ ಎಂದು ಸೂಚನೆ ನೀಡಲಾಗಿದೆ.
ಸಿಬ್ಬಂದಿ ಇನ್ನು ಮುಂದೆ ಜೀನ್ಸ್, ಟೀ-ಶರ್ಟ್, ಸ್ಪೋಟ್ಸ್ ಶೂ, ಟಾಪ್, ಲೇ ವೇಸ್ಟ್ ಪ್ಯಾಂಟ್ಗಳನ್ನು ಧರಿಸುವಂತಿಲ್ಲ ಎಂದು ಡಿಸಿಪಿ ಅನಂತ್ ಮಿತ್ತಲ್ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.