ನವದೆಹಲಿ: ಆತ್ಮನಿರ್ಭರ ಭಾರತದ ಮಹತ್ತರ ಮೈಲಿಗಲ್ಲು ಎಂಬಂತೆ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ತಯಾರಿಸಿದ ದೇಶಿ ನಿರ್ಮಿತ ಹೈಪರ್ಸಾನಿಕ್ ಟೆಕ್ನಾಲಜಿ ಡೆಮನ್‌ಸ್ಟ್ರೇಟರ್ ವೆಹಿಕಲ್ (ಹೆಚ್‌ಎಸ್‌ಟಿಡಿವಿ) ಹಾರಾಟ ಪರೀಕ್ಷೆ ಇಂದು ಯಶಸ್ವಿಯಾಗಿದೆ.
ಕೇವಲ 20 ಸೆಕೆಂಡ್ಗಳ್ಲಿ 6 ಮ್ಯಾಕ್ ವೇಗದಲ್ಲಿ 32.5 ಕಿ.ಮೀ ಎತ್ತರಕ್ಕೆ ಚಲಿಸಬಲ್ಲ ಸಾಮರ್ಥ್ಯ ಹೊಂದಿರುವ ವಾಹಕ ಇದಾಗಿದೆ. ಡಿಆರ್‌ಡಿಒಗೆ ಅಭಿನಂದಿಸಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಪ್ರಧಾನಿ ನರೇಂದ್ರ ಮೋದಿ ಅವರ 'ಆತ್ಮನಿರ್ಭರ ಭಾರತ' (ಸ್ವಾವಲಂಬಿ ಭಾರತ) ಕನಸನ್ನು ಸಾಕಾರಗೊಳಿಸುವ ಮಹತ್ವದ ಸಾಧನೆ ಇದಾಗಿದೆ ಎಂದು ಹೇಳಿದ್ದಾರೆ.