ಪಶ್ಚಿಮ ಬಂಗಾಳ:ಇಲ್ಲಿನ ವಾಯುನೆಲೆಯಿಂದ ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆಯು ನಡೆಸಿದ 'ಅಸ್ತ್ರ' ಕ್ಷಿಪಣಿ ಪರೀಕ್ಷಾರ್ಥ ಪ್ರಯೋಗ ಯಶಸ್ವಿಗೊಂಡಿದೆ.
'ಅಸ್ತ್ರ' ಕ್ಷಿಪಣಿ ಯಶಸ್ವಿ ಪರೀಕ್ಷೆ: ಎದುರಾಳಿ ಎದೆಗಳಲ್ಲಿ ಹುಟ್ಟು ಹಾಕಿತು ಮತ್ತಷ್ಟು ನಡುಕ - ಅಸ್ತ್ರ ಕ್ಷಿಪಣಿ ಪರೀಕ್ಷಾರ್ಥ ಪ್ರಯೋಗ ಯಶಸ್ವಿ
ಭಾರತೀಯ ಸೇನೆಗೆ ರಕ್ಷಣಾ ಸಾಮಗ್ರಿಗಳನ್ನು ಪೂರೈಸುವ ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆಯು (ಡಿಆರ್‌ಡಿಒ) 'ಅಸ್ತ್ರ' ಕ್ಷಿಪಣಿ ಪರೀಕ್ಷಾರ್ಥ ಪ್ರಯೋಗ ಯಶಸ್ವಿಗೊಂಡಿದ್ದು, ಎದುರಾಳಿಗಳ ಎದೆಯಲ್ಲಿ ಮತ್ತಷ್ಟು ಭಯ ಹುಟ್ಟು ಹಾಕಿದೆ.

ಅಸ್ಟ್ರಾ ಕ್ಷಿಪಣಿ ಯಶಸ್ವಿ
ಅಸ್ತ್ರ ಏರ್-ಟು-ಏರ್ ಕ್ಷಿಪಣಿಯಾಗಿದೆ. 70 ಕಿ.ಮೀ ಗುರಿ ಹೊಂದಿರುವ ಈ ಕ್ಷಿಪಣಿ ಪರೀಕ್ಷೆಗೆ ಎಸ್ಯು-30 ಎಂಕೆಐ ಯುದ್ಧ ವಿಮಾನವನ್ನು ಬಳಸಲಾಗಿತ್ತು. ಅಸ್ತ್ರ ಕ್ಷಿಪಣಿ ನಿಗದಿತ ಗುರಿಯನ್ನು ಯಶಸ್ವಿಯಾಗಿ ಭೇದಿಸಿತು ಎಂದು ಸೇನಾಪಡೆ ಮೂಲಗಳು ತಿಳಿಸಿವೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಪ್ಟೆಂಬರ್ 19 ರಂದು ಬೆಂಗಳೂರಿಗೆ ಆಗಮಿಸಲಿದ್ದು, ಯುದ್ದ ವಿಮಾನ ತೇಜಸ್‌ನಲ್ಲಿ (ಎಲ್‌ಸಿಎ) ಹಾರಾಟ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.
Last Updated : Sep 17, 2019, 5:05 PM IST