ನವದೆಹಲಿ:ಒಡಿಶಾ ಕರಾವಳಿಯ ವೀಲರ್ ದ್ವೀಪದ ಬಳಿ ಭಾರತ ಸೂಪರ್ ಸಾನಿಕ್ ಕ್ಷಿಪಣಿ ಟಾರ್ಪೆಡೋ (ಸ್ಮಾರ್ಟ್) ಪ್ರಯೋಗ ಯಶಸ್ವಿಯಾಗಿ ನಡೆಸಲಾಗಿದ್ದು, ಇದಕ್ಕೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಭಿನಂದನೆ ಸಲ್ಲಿಸಿದ್ದಾರೆ.
ಸೂಪರ್ ಸಾನಿಕ್ ಕ್ಷಿಪಣಿ ಪರೀಕ್ಷೆ ಯಶಸ್ವಿ... ರಕ್ಷಣಾ ಸಚಿವರಿಂದ ಅಭಿನಂದನೆ! - ಸೂಪರ್ ಸಾನಿಕ್ ಕ್ಷಿಪಣಿ ಟಾರ್ಪಿಡೊ ಸುದ್ದಿ
ಡಿಆರ್ಡಿಒ ಬ್ರಹ್ಮೋಸ್ ಸೂಪರ್ ಸಾನಿಕ್ ಟಾರ್ಪೆಡೋ (ಸ್ಮಾರ್ಟ್) ಕ್ಷಿಪಣಿ ಯಶಸ್ವಿ ಪರೀಕ್ಷಾ ಉಡಾವಣೆಯೊಂದಿಗೆ ಮತ್ತೊಂದು ಮೈಲಿಗಲ್ಲು ಸಾಧಿಸಿದೆ.
![ಸೂಪರ್ ಸಾನಿಕ್ ಕ್ಷಿಪಣಿ ಪರೀಕ್ಷೆ ಯಶಸ್ವಿ... ರಕ್ಷಣಾ ಸಚಿವರಿಂದ ಅಭಿನಂದನೆ! India successfully tests supersonic missile technology](https://etvbharatimages.akamaized.net/etvbharat/prod-images/768-512-9056862-thumbnail-3x2-wdfdf.jpg)
ಜಲಾಂತರ್ಗಾಮಿ ವಿರೋಧಿ ಯುದ್ಧದಲ್ಲಿ ಸ್ಟ್ಯಾಂಡ್ ಆಫ್ ಸಾರ್ಮಥ್ಯಕ್ಕಾಗಿ ಇದು ಪ್ರಮುಖವಾಗಿ ಕಾರ್ಯ ನಿರ್ವಹಿಸಲಿದೆ. ಈ ಕ್ಷಿಪಣಿ ಹಗುರವಾದ ಟಾರ್ಪೆಡೋ ಸಿಸ್ಟಮ್ ಹೊಂದಿದೆ. ಸಮರ ನೌಕೆಗಳಲ್ಲಿ 'ಸ್ಮಾರ್ಟ್' ಕ್ಷಿಪಣಿಗಳನ್ನು ಅಳವಡಿಸಲಾಗುತ್ತದೆ.
ಕಳೆದ ನಾಲ್ಕು ದಿನಗಳ ಹಿಂದೆ ಇದೇ ಪ್ರದೇಶದಲ್ಲಿ ಬ್ರಹ್ಮೋಸ್ ಸೂಪರ್ ಸಾನಿಕ ಕ್ರೂಸ್ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗ ಯಶಸ್ವಿಯಾಗಿತ್ತು. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ, ರಾಜನಾಥ್ ಸಿಂಗ್ ಅಭಿನಂದನೆ ಸಲ್ಲಿಕೆ ಮಾಡಿದ್ದರು. ರಕ್ಷಣಾ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆ (ಡಿಆರ್ಡಿಒ) ಸಂಪೂರ್ಣ ದೇಶೀಯವಾಗಿ ನಿರ್ಮಿಸಿರುವ ಭೂಮಿಯಿಂದ ಚಿಮ್ಮುವ ಸೂಪರ್ ಸಾನಿಕ್ ಕ್ಷಿಪಣಿ ಇದಾಗಿದೆ.