ನವದೆಹಲಿ:ಬಾಹ್ಯಾಕಾಶದಲ್ಲಿ ನಡೆಯುತ್ತಿರುವ ಎಲ್ಲ ಪ್ರಯೋಗಗಳ ಬಗ್ಗೆ ವಿಶ್ವದ ಗಮನಕ್ಕೆ ತಂದು ಹಾಗೂ ಅಗತ್ಯ ಅನುಮತಿಗಳನ್ನ ಪಡೆದುಕೊಂಡೇ ಮಾಡಲಾಗುತ್ತಿದೆ. ಇದರಲ್ಲಿ ಯಾವುದನ್ನೂ ಮುಚ್ಚಿಡುವ ಅಗತ್ಯವಿಲ್ಲ ಎಂದು ಇಸ್ರೋ ಸ್ಪಷ್ಟ ಪಡಿಸಿದೆ.
ಮಿಷನ್ ಶಕ್ತಿ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಡಿಆರ್ಡಿಒ ಮುಖ್ಯಸ್ಥ ಜಿ.ಎಸ್. ರೆಡ್ಡಿ, ನಮ್ಮ ಬಾಹ್ಯಾಕಾಶ ಕಾರ್ಯಕ್ರಮಗಳು ಯಾವುದೂ ಗುಪ್ತವಾಗಿ ನಡೆಯುತ್ತಿಲ್ಲ. ಎಲ್ಲವೂ ವಿಶ್ವ ಸಮುದಾಯ ಹಾಗೂ ಅಗತ್ಯ ಅನುಮತಿಗಳೊಂದಿಗೆ ಮುಂದುವರೆದಿವೆ ಎಂದು ಸ್ಪಷ್ಟಪಡಿಸಿದ್ದಾರೆ.
300 ಅನಗತ್ಯ ವಸ್ತುಗಳು ಭೂಮಿಗೆ ಬಿದ್ದಿವೆ . ಅವುಗಳನ್ನ ನಾವು ಕಲೆಕ್ಟ್ ಮಾಡಿದ್ದೇವೆ ಎಂದು ನಾಸಾ ಹೇಳಿಕೊಂಡಿದ್ದಲ್ಲದೇ, ಭಾರತ ತನ್ನದೇ ಸ್ಯಾಟಿಲೈಟ್ ಹೊಡೆದುರುಳಿಸಿದ ಬಗ್ಗೆ ಕಳವಳ ವ್ಯಕ್ತಪಡಿಸಿತ್ತು. ಬಾಹ್ಯಾಕಾಶ ಕ್ಲೀನಾಗಿ ಇಡಲು ಇಂತಹ ಪ್ರಯೋಗಗಳು ಅಡ್ಡಿಯಾಗುತ್ತವೆ ಎಂದು ಅಸಮಾಧಾನ ವ್ಯಕ್ತಪಡಿಸಿತ್ತು. ಈ ಹಿನ್ನೆಲೆಯಲ್ಲಿ ಹೇಳಿಕೆ ನೀಡಿದ ರೆಡ್ಡಿ, ಇಂತಹ ವಾದಗಳನ್ನ ಜಿ ಎಸ್ ರೆಡ್ಡಿ ತಳ್ಳಿಹಾಕಿದ್ದು, 45 ದಿನಗಳಲ್ಲಿ ಉಪಗ್ರಹದ ಅವಶೇಷಗಳು ನಾಶವಾಗಲಿವೆ. ಇದರಿಂದ ಯಾವುದೇ ತೊಂದರೆ ಇಲ್ಲ ಎಂದು ಸ್ಪಷ್ಟಪಡಿಸಿರುವ ಅವರು, ನಾಸಾ ವಾದವನ್ನು ತಳ್ಳಿ ಹಾಕಿದರು.
ಬಾಹ್ಯಾಕಾಶದ ಸಂಶೋದನೆಯಲ್ಲಿ 30 ರಿಂದ 40 ಮಹಿಳೆಯರು ಭಾಗಿಯಾಗಿದ್ದಾರೆ. ಮಹಿಳೆಯರನ್ನೂ ಒಳಗೊಂಡಂತೆ ಇಸ್ರೋ ಕೆಲಸ ಮಾಡುತ್ತಿದೆ ಎಂದರು.