ಕರ್ನಾಟಕ

karnataka

ETV Bharat / bharat

ಲಂಡನ್​​​​ನಲ್ಲಿ ಕೊರೊನಾ ವಿರುದ್ಧ ಹೋರಾಡಿ ಗುಣಮುಖರಾದ ಕನ್ನಡಿಗ ಡಾ. ನೀರಜ್ ಪಾಟೀಲ್ - Dr. Neeraj Patil has made recovery from COVID 19

ಈ ಮಾರಣಾಂತಿಕ ಕಾಯಿಲೆಯಿಂದ ಸಂಪೂರ್ಣ ಚೇತರಿಸಿಕೊಂಡಿದ್ದೇನೆ. ಎನ್‌ಎಚ್‌ಎಸ್‌ನಲ್ಲಿ ಅಪಘಾತ ಮತ್ತು ತುರ್ತು ಘಟಕದಲ್ಲಿ ಸಲಹೆಗಾರನಾಗಿ ನಾನು ಕಾರ್ಯನಿರ್ವಹಿಸುತ್ತಿದ್ದು, ಮತ್ತೆ ಕೆಲಸಕ್ಕೆ ಹೋಗುತ್ತೇನೆ ಎಂದು ಡಾ. ನೀರಜ್ ಪಾಟೀಲ್ ತಿಳಿಸಿದ್ದಾರೆ.

Dr. Neeraj Patil has made recovery from COVID 19
Dr. Neeraj Patil has made recovery from COVID 19

By

Published : May 2, 2020, 11:47 PM IST

Updated : May 3, 2020, 12:05 AM IST

ಹೈದರಾಬಾದ್​ : ಕೊರೊನಾ ಸೋಂಕಿಗೆ ಒಳಗಾಗಿದ್ದ ವೈದ್ಯ ಚೇತರಿಸಿಕೊಂಡಿದ್ದು, ದೇವರ ಆಶೀರ್ವಾದ ಮತ್ತು ನನ್ನ ಕುಟುಂಬ, ಸ್ನೇಹಿತರು ಮತ್ತು ಹಿತೈಷಿಗಳ ಪ್ರಾರ್ಥನೆಯೊಂದಿಗೆ, ನಾನು ಸಂಪೂರ್ಣ ಗುಣಮುಖನಾಗಿದ್ದೇನೆ ಎಂದು ಲಂಡನ್​ನಲ್ಲಿರುವ ಕನ್ನಡಿಗ ಡಾ. ನೀರಜ್​ ಪಾಟೀಲ್​​​​ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಇದು ನನಗೆ ಮತ್ತು ನನ್ನ ಕುಟುಂಬಕ್ಕೆ ಬಹಳ ಕಷ್ಟದ ಕ್ಷಣವಾಗಿದೆ. ನಾನು ಅದೃಷ್ಟಶಾಲಿ ಎಂದು ಪರಿಗಣಿಸುತ್ತೇನೆ. ಈ ಮಾರಣಾಂತಿಕ ಕಾಯಿಲೆಯಿಂದ ಸಂಪೂರ್ಣ ಚೇತರಿಸಿಕೊಂಡಿದ್ದೇನೆ. ಎನ್‌ಎಚ್‌ಎಸ್‌ನಲ್ಲಿ ಅಪಘಾತ ಮತ್ತು ತುರ್ತು ಘಟಕದಲ್ಲಿ ಸಲಹೆಗಾರನಾಗಿ ಕಾರ್ಯನಿರ್ವಹಿಸುತ್ತಿದ್ದು, ನಾನು ಮತ್ತೆ ಕೆಲಸಕ್ಕೆ ಹೋಗುತ್ತೇನೆ. ಭಾರತ ಮತ್ತು ಭಾರತೀಯರಿಗಾಗಿ ನಾನು ದೇವರನ್ನು ಪ್ರಾರ್ಥಿಸುತ್ತೇನೆ. ಕಟ್ಟುನಿಟ್ಟಾದ ಸಾಮಾಜಿಕ ದೂರ, ನಿಯಮಿತವಾಗಿ ಕೈ ತೊಳೆಯುವುದು ಮತ್ತು ಮುಖಕ್ಕೆ ಬೆರಳುಗಳನ್ನು ಮುಟ್ಟದಂತೆ ನೋಡಿಕೊಳ್ಳಿ ಎಂದು ಅವರು ಜನರಿಗೆ ಮನವಿ ಮಾಡಿದ್ದಾರೆ.

ಲ್ಯಾಂಬೆತ್‌ನ ಮಾಜಿ ಮೇಯರ್ ಆಗಿರುವ ಕನ್ನಡಿಗ ಡಾ. ನೀರಜ್ ಪಾಟೀಲ್ ಎನ್‌ಎಚ್‌ಎಸ್​ನಲ್ಲಿ ಅಪಘಾತ ಮತ್ತು ತುರ್ತು ನಿಗಾ ಘಟಕದಲ್ಲಿ ಸಲಹೆಗಾರರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.

Last Updated : May 3, 2020, 12:05 AM IST

For All Latest Updates

TAGGED:

ABOUT THE AUTHOR

...view details