ಕರ್ನಾಟಕ

karnataka

By

Published : Nov 7, 2019, 9:26 PM IST

ETV Bharat / bharat

ಡಾ.ಮಂಜುಳಾ ರೆಡ್ಡಿಗೆ ಜೀವ ವಿಜ್ಞಾನಿ ವಿಭಾಗದ ಪ್ರತಿಷ್ಠಿತ ಇನ್ಫೋಸಿಸ್‌ ಪ್ರಶಸ್ತಿ

ಇನ್ಫೋಸಿಸ್ ಸೈನ್ಸ್ ಫೌಂಡೇಶನ್ ವತಿಯಿಂದ ವಿವಿಧ ವಿಭಾಗಗಳಲ್ಲಿ ನೀಡಲಾಗುವ ಪ್ರಶಸ್ತಿಗೆ ಸಾಧಕರ ಹೆಸರು ಪ್ರಕಟಗೊಂಡಿದೆ.

ಡಾ. ಮಂಜುಳಾ ರೆಡ್ಡಿ

ಹೈದರಾಬಾದ್​​:ಪ್ರಸಕ್ತ ವರ್ಷದ ಇನ್ಫೋಸಿಸ್ ಸೈನ್ಸ್ ಫೌಂಡೇಶನ್ ವತಿಯಿಂದ ನೀಡಲಾಗುವ 2019ನೇ ಸಾಲಿನ ಇನ್ಫೋಸಿಸ್ ಪ್ರಶಸ್ತಿ ಪ್ರಕಟವಾಗಿದೆ.

ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ)ಯ ಪ್ರೊ. ಜಿ. ಮುಗೇಶ್ ಅವರಿಗೆ ಭೌತಿಕ ವಿಜ್ಞಾನದಲ್ಲಿ ಪ್ರಶಸ್ತಿ ಲಭಿಸಿದ್ದು, ಮಾನವೀಯತೆ ಕ್ಷೇತ್ರದಲ್ಲಿ ಭಾರತೀಯ ತಂತ್ರಜ್ಞಾನ ಸಂಸ್ಥೆಯ ಪ್ರೊ. ಮನು ವಿ. ದೇವದೇವನ್ ಅವರಿಗೆ ಪ್ರಶಸ್ತಿ ಸಂದಿದೆ.

ಜೀವ ವಿಜ್ಞಾನ ವಿಭಾಗದಲ್ಲಿ ಹೈದರಾಬಾದ್‌ನ ವಿಜ್ಞಾನಿ ಡಾ. ಮಂಜುಳಾ ರೆಡ್ಡಿ, ಗಣಿತ ವಿಜ್ಞಾನದಲ್ಲಿ ಜ್ಯೂರಿಚ್‌ನ ಪ್ರೊ. ಸಿದ್ಧಾರ್ಥ ಮಿಶ್ರಾ, ಸಾಮಾಜಿಕ ವಿಜ್ಞಾನ ವಿಭಾಗದಲ್ಲಿ ಪ್ರೊ. ಆನಂದ್ ಪಾಂಡಿಯನ್, ಎಂಜಿನಿಯರ್ ಮತ್ತು ಕಂಪ್ಯೂಟರ್ ಸೈನ್ಸ್‌ ವಿಭಾಗದಲ್ಲಿ ‍ಐಐಟಿ ಬಾಂಬೆಯ ಪ್ರೊ. ಸುನೀತಾ ಸುರವಗಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಪ್ರಶಸ್ತಿಯು ಚಿನ್ನದ ಪದಕ ಮತ್ತು 1 ಲಕ್ಷ ಅಮೆರಿಕನ್‌ ಡಾಲರ್ (ಸುಮಾರು 70 ಲಕ್ಷ ರೂಪಾಯಿ) ಮೊತ್ತದ ಬಹುಮಾನವನ್ನು ಒಳಗೊಂಡಿದೆ. ಇಂದು ಬೆಂಗಳೂರಿನ ಇನ್ಫೋಸಿಸ್‌ ಕ್ಯಾಂಪಸ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಸ್ಥಾಪಕ ಅಧ್ಯಕ್ಷ ಎನ್. ನಾರಾಯಣ ಮೂರ್ತಿ, ಸಿಇಒ ನಂದನ್ ನಿಲೇಕಣಿ, ಕ್ರಿಸ್‌ ಗೋಪಾಲಕೃಷ್ಣ ಪ್ರಶಸ್ತಿ ಘೋಷಣೆ ಮಾಡಿದರು.

ಹೈದರಾಬಾದ್‌ನ ವಿಜ್ಞಾನಿ ಡಾ. ಮಂಜುಳಾ ರೆಡ್ಡಿ ಅವರಿಗೆ, ಬ್ಯಾಕ್ಟೀರಿಯಾದ ಕೋಶಗೋಡೆಯ ಸಂರಚನೆ ಮತ್ತು ಸಂಶ್ಲೇಷಣೆ ಅರ್ಥಮಾಡಿಕೊಳ್ಳುವ ಸಂಶೋಧನೆಗೆ ಪ್ರಶಸ್ತಿ ನೀಡಲಾಗಿದ್ದು, ಹೊಸ ಜೀವಕಣಗಳ ಬೆಳವಣಿಗೆಗೆ ಬ್ಯಾಕ್ಟೀರಿಯಾದ ಬೆಳವಣಿಗೆ ಮತ್ತು ವಿಭಜನೆಯ ಮೂಲಭೂತ ಹಂತಗಳ ಬಗ್ಗೆ ನಡೆಸಿರುವ ಸಂಶೋಧನೆ ನಿರ್ಣಾಯಕ ಪಾತ್ರವಹಿಸಿದೆ.

ABOUT THE AUTHOR

...view details