ಕರ್ನಾಟಕ

karnataka

ETV Bharat / bharat

ವಿಜ್ಞಾನ - ರಾಜಕೀಯ ಕ್ಷೇತ್ರದಲ್ಲಿ ಡಾ. ಕಲಾಂ ಅವರದ್ದು ಅಳಿಸಲಾಗದ ಗುರುತು: ಅಮಿತ್ ಶಾ - ಪೋಖ್ರಾನ್- II

ವಿಜ್ಞಾನದಿಂದ ರಾಜಕೀಯದವರೆಗಿನ ಹಲವಾರು ಕ್ಷೇತ್ರಗಳಲ್ಲಿ ಅಳಿಸಲಾಗದ ಗುರುತುಗಳನ್ನು ಬಿಟ್ಟಿರುವ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಜನರ ನೆಚ್ಚಿನ ರಾಷ್ಟ್ರಪತಿಯಾಗಿದ್ದರು ಎಂದು ಅಮಿತ್ ಶಾ ಟ್ವೀಟ್ ಮಾಡಿದ್ದಾರೆ.

abdul kalam
abdul kalam

By

Published : Jul 27, 2020, 12:56 PM IST

ನವದೆಹಲಿ: ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಪುಣ್ಯತಿಥಿಯಂದು ಗೃಹ ಸಚಿವ ಅಮಿತ್ ಶಾ ಗೌರವ ಸಲ್ಲಿಸಿದರು. ಕಲಾಂ ಅವರು ವಿಜ್ಞಾನದಿಂದ ರಾಜಕೀಯದವರೆಗಿನ ಹಲವಾರು ಕ್ಷೇತ್ರಗಳಲ್ಲಿ ಅಳಿಸಲಾಗದ ಗುರುತುಗಳನ್ನು ಬಿಟ್ಟಿ ಹೋಗಿದ್ದಾರೆ ಎಂದು ಹೇಳಿದರು.

"ಬುದ್ಧಿಶಕ್ತಿ, ಬುದ್ಧಿವಂತಿಕೆ ಮತ್ತು ಸರಳತೆಯ ಸಾರಾಂಶವಾದ ಡಾ. ಎಪಿಜೆ ಅಬ್ದುಲ್ ಕಲಾಂ ಅವರಿಗೆ ನಾನ ಗೌರವ ಸಲ್ಲಿಸುತ್ತೇನೆ. ವಿಜ್ಞಾನದಿಂದ ರಾಜಕೀಯದವರೆಗಿನ ಹಲವಾರು ಕ್ಷೇತ್ರಗಳಲ್ಲಿ ಅಳಿಸಲಾಗದ ಗುರುತುಗಳನ್ನು ಬಿಟ್ಟಿರುವ ಅವರು ಜನರ ನೆಚ್ಚಿನ ರಾಷ್ಟ್ರಪತಿಯಾಗಿದ್ದರು" ಎಂದು ಶಾ ಟ್ವೀಟ್ ಮಾಡಿದ್ದಾರೆ.

ಕಲಾಂ ಅವರ ಜ್ಞಾನದ ಅನ್ವೇಷಣೆಯು ಸ್ವಾವಲಂಬಿ ಭಾರತದ ಕಲ್ಪನೆಯನ್ನು ಪ್ರೇರೇಪಿಸುತ್ತದೆ ಎಂದು ಶಾ ಹೇಳಿದರು.

ಭಾರತದ ಕ್ಷಿಪಣಿ ಮನುಷ್ಯ ಎಂದು ಕರೆಯಲ್ಪಡುವ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರು ವಿಜ್ಞಾನಕ್ಕೆ ಮಾತ್ರವಲ್ಲದೇ ಭಾರತದ 11ನೇ ರಾಷ್ಟ್ರಪತಿಯಾಗಿಯೂ ಸೇವೆ ಸಲ್ಲಿಸಿದ್ದರು.

ಏರೋಸ್ಪೇಸ್ ವಿಜ್ಞಾನಿಯಾಗಿ, ಕಲಾಂ ಅವರು ಭಾರತದ ಎರಡು ಪ್ರಮುಖ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗಳಾದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಹಾಗೂ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯೊಂದಿಗೆ (ಇಸ್ರೋ) ಕೆಲಸ ಮಾಡಿದ್ದರು.

ಭಾರತದ ಪ್ರಮುಖ ಪರಮಾಣು ಪರೀಕ್ಷೆಗಳಲ್ಲಿ ಒಂದಾದ ಪೋಖ್ರಾನ್- IIನಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ವಿಜ್ಞಾನ ಮತ್ತು ರಾಜಕೀಯ ಕ್ಷೇತ್ರದ ಕೊಡುಗೆಗಾಗಿ ಅವರಿಗೆ ಭಾರತದ ಅತ್ಯುನ್ನತ ನಾಗರಿಕ ಗೌರವ ಭಾರತ ರತ್ನ ನೀಡಲಾಯಿತು.

ABOUT THE AUTHOR

...view details