ಕೋಲ್ಕತಾ :"ಸೌರವ್ ಗಂಗೂಲಿ ಅವರ ಆರೋಗ್ಯದಲ್ಲಿ ಯಾವುದೇ ದೊಡ್ಡ ಸಮಸ್ಯೆ ಪತ್ತೆಯಾಗಿಲ್ಲ. ಅವರ ಹೃದಯವು ಸಂಪೂರ್ಣವಾಗಿ ಸದೃಢವಾಗಿದೆ." ಎಂದು ಗಂಗೂಲಿ ಅವರ ಆರೋಗ್ಯ ಸ್ಥಿತಿಯನ್ನು ಪರಿಶೀಲಿಸಿದ ಪ್ರಸಿದ್ಧ ಹೃದಯ ತಜ್ಞ ಡಾ. ದೇವಿ ಶೆಟ್ಟಿ ಹೇಳಿದ್ದಾರೆ.
ಸೌರವ್ ಗಂಗೂಲಿ ಅವರ ಆರೋಗ್ಯ ಸ್ಥಿತಿ ಪರೀಕ್ಷಿಸಲು ಡಾ. ದೇವಿ ಶೆಟ್ಟಿ ಇಂದು ಕೋಲ್ಕತಾಗೆ ಆಗಮಿಸಿದ್ದು, ವುಡ್ಲ್ಯಾಂಡ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೌರವ್ ಗಂಗೂಲಿಯವರ ಆರೋಗ್ಯ ಸ್ಥಿತಿ ಪರಿಶೀಲನೆ ನಡೆಸಿದ್ದಾರೆ. ನಾಳೆ ಸೌರವ್ ಗಂಗೂಲಿಯವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗುತ್ತದೆ.