ನವದೆಹಲಿ:ಲಾಕ್ಡೌನ್ನಿಂದಾಗಿ ರಾಷ್ಟ್ರ ರಾಜಧಾನಿಯಲ್ಲಿ ಸಿಲುಕಿರುವ ಕೇರಳಿಗರು ತಮ್ಮ ರಾಜ್ಯ ತಲುಪಲು ಅಗತ್ಯವಿರುವ ಪ್ರಯಾಣ ವೆಚ್ಚವನ್ನು ಭರಿಸುವುದಾಗಿ ದೆಹಲಿ ಪ್ರದೇಶ ಕಾಂಗ್ರೆಸ್ ಕಮಿಟಿ (ಡಿಪಿಸಿಸಿ) ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಪತ್ರ ಬರೆದಿದೆ.
"ತಮ್ಮ ಪ್ರಯಾಣ ವೆಚ್ಚವನ್ನು ಭರಿಸಲಾಗದ ಮತ್ತು ಕೇರಳಕ್ಕೆ ಮರಳಲು ಬಯಸುವ ಎಲ್ಲ ಕೇರಳಿಗರ ಪ್ರಯಾಣ ವೆಚ್ಚವನ್ನು ಡಿಪಿಸಿಸಿ ಭರಿಸಲು ಇಚ್ಚಿಸುತ್ತದೆ. ನಿಮ್ಮಿಂದ ಆದಷ್ಟು ಬೇಗ ಉತ್ತರವನ್ನು ಎದುರು ನೋಡುತ್ತಿದ್ದೇವೆ" ಎಂದು ದೆಹಲಿ ಕಾಂಗ್ರೆಸ್ ಮುಖ್ಯಸ್ಥ ಚಿ ಅನಿಲ್ ಕುಮಾರ್ ಅವರು ಪಿಣರಾಯಿ ವಿಜಯನ್ ಅವರಿಗೆ ಪತ್ರದಲ್ಲಿ ತಿಳಿಸಿದ್ದಾರೆ.