ಕರ್ನಾಟಕ

karnataka

ETV Bharat / bharat

ನಿವಾರ್ ಚಂಡಮಾರುತ ಭೀತಿಯಲ್ಲಿರುವ ಜನ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳಿವು!

ನಿವಾರ್ ಚಂಡಮಾರುತದ ಅಬ್ಬರ ಅಲ್ಪ ಪ್ರಮಾಣದಲ್ಲಿ ಪ್ರಾರಂಭವಾಗಿದ್ದು, ಮಮಲ್ಲಾಪುರಂ ಕರಾವಳಿಯಲ್ಲಿ ಭಾರೀ ವೇಗದಲ್ಲಿ ಗಾಳಿ ಬೀಸುತ್ತಿದೆ. ತಮಿಳುನಾಡಿನಲ್ಲಿ ಸುರಕ್ಷಿತವಲ್ಲದ ಕಟ್ಟಡಗಳು ಮತ್ತು ತಗ್ಗು ಪ್ರದೇಶದಲ್ಲಿನ ಜನರನ್ನು ಸ್ಥಳಾಂತರ ಮಾಡಲಾಗುತ್ತಿದೆ..

dos and don'ts before cyclone
ನಿವಾರ್ ಚಂಡಮಾರುತ ಭೀತಿ

By

Published : Nov 25, 2020, 9:55 PM IST

ನವದೆಹಲಿ :ಭಾರತೀಯ ಉಪಖಂಡವು ವಿಶ್ವದ ಅತ್ಯಂತ ಕೆಟ್ಟ ಚಂಡಮಾರುತ ಪೀಡಿತ ಪ್ರದೇಶಗಳಲ್ಲಿ ಒಂದಾಗಿದೆ. 8,041 ಕಿಲೋಮೀಟರ್ ಉದ್ದದ ಕರಾವಳಿಯನ್ನು ಹೊಂದಿರುವ ಉಪಖಂಡವು ವಿಶ್ವದ ಉಷ್ಣವಲಯದ ಚಂಡಮಾರುತಗಳಲ್ಲಿ ಸುಮಾರು 10ರಷ್ಟು ಒಡ್ಡಲ್ಪಟ್ಟಿದೆ.

ಪಶ್ಚಿಮ ಕರಾವಳಿ-ಅರೇಬಿಯನ್ ಸಮುದ್ರ ಮತ್ತು ಪೂರ್ವ ಕರಾವಳಿ-ಬಂಗಾಳಕೊಲ್ಲಿಯಲ್ಲಿ ಆಗಿಂದಾಗ್ಗೆ ಚಂಡಮಾರುತಗಳು ಸಂಭವಿಸುತ್ತವೆ. ಇದೀಗ ನಿವಾರ್ ಚಂಡಮಾರುತ ತಮಿಳುನಾಡು, ಪುದುಚೆರಿ ಮತ್ತು ಆಂಧ್ರಪ್ರದೇಶ ಭಾಗಗಳಿಗೆ ಅಪ್ಪಳಿಸುತ್ತಿದ್ದು, ಮಮಲ್ಲಾಪುರಂ ಕರಾವಳಿಯಲ್ಲಿ ಭಾರೀ ವೇಗದಲ್ಲಿ ಗಾಳಿ ಬೀಸುತ್ತಿದೆ.

ತಮಿಳುನಾಡಿನಲ್ಲಿ ಸುರಕ್ಷಿತವಲ್ಲದ ಕಟ್ಟಡಗಳು ಮತ್ತು ತಗ್ಗು ಪ್ರದೇಶದಲ್ಲಿನ ಜನರನ್ನು ಸ್ಥಳಾಂತರ ಮಾಡಲಾಗುತ್ತಿದೆ. ಇಂತಹ ಸಮಯದಲ್ಲಿ ಜನರು ಅಗತ್ಯ ಕ್ರಮಗಳನ್ನು ಕೈಗೊಳ್ಳುವುದು ಅವಶ್ಯಕವಾಗಿದೆ.

ಸೈಕ್ಲೋನ್​ಗೂ ಮೊದಲು ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳು :

  • ಮನೆ ಪರಿಶೀಲಿಸಿ-ಸಡಿಲವಾದ ಅಂಚುಗಳನ್ನು ಸುರಕ್ಷಿತಗೊಳಿಸಿ ಮತ್ತು ಬಾಗಿಲು, ಕಿಟಕಿಗಳ ರಿಪೇರಿ ಕೈಗೊಳ್ಳಿ
  • ಮನೆಯ ಹತ್ತಿರ ಇರುವ ಒಣಗಿದ ಕೊಂಬೆಗಳು ಅಥವಾ ಮರಗಳನ್ನು ತೆಗೆದುಹಾಕಿ
  • ಬಲವಾದ ಗಾಳಿಗೆ ಹಾರಬಲ್ಲ ಮರದ ದಿಮ್ಮಿಗಳು, ಸಡಿಲವಾದ ಇಟ್ಟಿಗೆಗಳು, ಕಸದ ತೊಟ್ಟಿಗಳು, ಸೈನ್-ಬೋರ್ಡ್‌ಗಳು ಮುಂತಾದವುಗಳನ್ನು ತೆರವುಗೊಳಿಸುವುದು
  • ಸೀಮೆಎಣ್ಣೆ, ಬ್ಯಾಟರಿ ಚಾಲಿತ ಟಾರ್ಚ್‌ಗಳು ಮತ್ತು ಲ್ಯಾಂಟರ್ನ್ ಸಿದ್ಧವಾಗಿಡಿ
  • ಕೆಲವು ಹೆಚ್ಚುವರಿ ಬ್ಯಾಟರಿಗಳನ್ನು ಸಿದ್ಧವಾಗಿರಿಸಿ
  • ತುರ್ತು ಪರಿಸ್ಥಿತಿಯಲ್ಲಿ ಬಳಸಲು ಡ್ರೈ ಫುಡ್, ಹಾಳಾಗದ ಆಹಾರವನ್ನು ಯಾವಾಗಲೂ ಸಿದ್ಧವಾಗಿಡಿ

ಸೈಕ್ಲೋನ್ ಪ್ರಾರಂಭವಾದಾಗ:

  • ರೇಡಿಯೊವನ್ನು ಆಲಿಸಿ (ಅಖಿಲ ಭಾರತ ರೇಡಿಯೋ ಕೇಂದ್ರಗಳು ಹವಾಮಾನ ಎಚ್ಚರಿಕೆಗಳನ್ನು ನೀಡುತ್ತವೆ)
  • ಎಚ್ಚರಿಕೆಗಳನ್ನು ಮೇಲ್ವಿಚಾರಣೆ ಮಾಡಿ. ಇದು ಚಂಡಮಾರುತದ ತುರ್ತು ಪರಿಸ್ಥಿತಿಗಾಗಿ ತಯಾರಿ ಮಾಡಲು ನಿಮಗೆ ಸಹಾಯ ಮಾಡುತ್ತದೆ
  • ಮಾಹಿತಿಯನ್ನು ಇತರರಿಗೆ ರವಾನಿಸಿ
  • ವದಂತಿಗಳನ್ನು ನಿರ್ಲಕ್ಷಿಸಿ ಮತ್ತು ಅವುಗಳನ್ನು ಹರಡಬೇಡಿ
  • ಅಧಿಕೃತ ಮಾಹಿತಿಯನ್ನು ನಂಬಿ
  • ಚಂಡಮಾರುತದ ಎಚ್ಚರಿಕೆಯಂತೆ ಮುಂದಿನ 24 ಗಂಟೆಗಳ ಕಾಲ ಎಚ್ಚರವಾಗಿರಿ ಎಂದರೆ ಅಪಾಯವು 24 ಗಂಟೆಗಳ ಒಳಗೆ ಇರುತ್ತದೆ

ಸ್ಥಳಾಂತರಿಸುವ ಬಗ್ಗೆ ಸೂಚನೆ ನೀಡಿದಾಗ :

  • ನಿಮಗಾಗಿ ಮತ್ತು ನಿಮ್ಮ ಕುಟುಂಬಕ್ಕೆ ಕೆಲವು ದಿನಗಳವರೆಗೆ ಅಗತ್ಯ ವಸ್ತುಗಳನ್ನು ಪ್ಯಾಕ್ ಮಾಡಿ. ಇವುಗಳಲ್ಲಿ ಔಷಧಿಗಳು, ಶಿಶುಗಳು ಮತ್ತು ಮಕ್ಕಳಿಗೆ ಅಥವಾ ಹಿರಿಯರಿಗೆ ವಿಶೇಷ ಆಹಾರ ಇರಬೇಕು
  • ನಿಮ್ಮ ಪ್ರದೇಶಕ್ಕೆ ಸೂಚಿಸಲಾದ ಸರಿಯಾದ ಆಶ್ರಯ ಅಥವಾ ಸ್ಥಳಾಂತರಿಸುವ ಸ್ಥಳಗಳಿಗೆ ಹೋಗಿ.
  • ನಿಮ್ಮ ಆಸ್ತಿಯ ಬಗ್ಗೆ ಚಿಂತಿಸಬೇಡಿ
  • ಆಶ್ರಯದಲ್ಲಿ ಉಸ್ತುವಾರಿ ವ್ಯಕ್ತಿಯ ಸೂಚನೆಗಳನ್ನು ಅನುಸರಿಸಿ
  • ನೀವು ಹೊರಹೋಗುವಂತೆ ತಿಳಿಸುವವರೆಗೆ ಆಶ್ರಯದಲ್ಲಿ ಉಳಿಯಿರಿ

ಚಂಡಮಾರುತದ ನಂತರದ ಕ್ರಮಗಳು :

  • ನಿಮ್ಮ ಮನೆಗೆ ಹಿಂತಿರುಗಬಹುದು ಎಂದು ತಿಳಿಸುವವರೆಗೆ ನೀವು ಆಶ್ರಯದಲ್ಲಿರಬೇಕು
  • ತಕ್ಷಣ ಕಾಣಿಸಿಕೊಳ್ಳುವ ರೋಗಗಳ ವಿರುದ್ಧ ಚುಚ್ಚುಮದ್ದನ್ನು ಪಡೆಯಬೇಕು
  • ಸಡಿಲ ಮತ್ತು ತೂಗಾಡುತ್ತಿರುವ ವೈರ್​ಗಳನ್ನು ತಪ್ಪಿಸಿ
  • ನೀವು ಚಾಲನೆ ಮಾಡಬೇಕಾದರೆ, ಎಚ್ಚರಿಕೆಯಿಂದ ಚಾಲನೆ ಮಾಡಿ
  • ನಿಮ್ಮ ಆವರಣದಿಂದ ತಕ್ಷಣವೇ ಭಗ್ನಾವಶೇಷಗಳನ್ನು ತೆರವುಗೊಳಿಸಿ
  • ನಷ್ಟದ ಬಗೆಗಿನ ಮಾಹಿತಿಯನ್ನು ಸೂಕ್ತ ಅಧಿಕಾರಿಗಳಿಗೆ ವರದಿ ಮಾಡಿ

ABOUT THE AUTHOR

...view details