ನವದೆಹಲಿ: ಶ್ರೀಲಂಕಾದ ವಾಯವ್ಯ ಕರಾವಳಿಯಲ್ಲಿ ಅಗ್ನಿ ಅನಾಹುತಕ್ಕೆ ಒಳಗಾಗಿರುವ ಕಚ್ಚಾ ತೈಲ ಸಾಗಿಸುತ್ತಿದ್ದ ಎಂಟಿ ನ್ಯೂ ಡೈಮಂಡ್ ಹಡಗಿನಲ್ಲಿ ಬೆಂಕಿಯನ್ನು ನಂದಿಸಲು ಭಾರತದಿಂದ ಡೋನಿಯರ್ ಏರ್ಕ್ರಾಫ್ಟ್ ಅನ್ನು ಕಳುಹಿಸಲಾಗಿದೆ.
ಈ ಏರ್ಕ್ರಾಫ್ಟ್ನಲ್ಲಿ 700 ಕಿಲೋಗ್ರಾಮ್ನಷ್ಟು ಡಿಸಿಪಿ ( ಡ್ರೈ ಕೆಮಿಕಲ್ ಪೌಡರ್) ಅನ್ನು ರವಾನಿಸಲಾಗಿದ್ದು, ಬೆಂಕಿ ನಂದಿಸಲು ಈ ರಾಸಾಯನಿಕ ಬಳಸಲಾಗುತ್ತದೆ.
ಕೆಲವು ದಿನಗಳಿಂದ ತಹಬದಿಗೆ ಬಂದಿದ್ದ ಬೆಂಕಿ ಮತ್ತೆ ಕಾಣಿಸಿಕೊಂಡಿದೆ ಎಂದು ಭಾರತೀಯ ನೌಕಾಪಡೆ ಹೇಳಿದೆ. ಬೆಂಕಿಯನ್ನು ನಂದಿಸುವ ಪ್ರಕ್ರಿಯೆ ನಡೆಯುತ್ತಿದೆ. ರಕ್ಷಣಾ ತಂಡ ಸ್ಥಳಕ್ಕೆ ಧಾವಿಸಿದೆ ಎಂದು ನೌಕಾಪಡೆ ಟ್ವಿಟರ್ನಲ್ಲಿ ಸ್ಪಷ್ಟನೆ ನೀಡಿದೆ.