ಮುಂಬೈ: ಮಹಾರಾಷ್ಟ್ರದಲ್ಲಿ ಕೋವಿಡ್ -19 ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಕೇಂದ್ರದ ಆರೋಗ್ಯ ತಂಡ ನೀಡಿರುವ ವರದಿಗಳ ಬಗ್ಗೆ ಜನರು ಭಯಭೀತರಾಗಬಾರದು ಎಂದು ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ಟೊಪೆ ಇಂದು ಹೇಳಿದ್ದಾರೆ. ರಾಜ್ಯದಲ್ಲಿ ಹಾಟ್ ಸ್ಪಾಟ್‌ಗಳ ಸಂಖ್ಯೆ 14 ರಿಂದ ಐದಕ್ಕೆ ಇಳಿದಿದೆ ಎಂದು ಇದೇ ವೇಳೆ ತಿಳಿದ್ದಾರೆ.
ಏಪ್ರಿಲ್ 30 ರೊಳಗಾಗಿ ಮುಂಬೈನಲ್ಲಿ 42,604 ಪ್ರಕರಣಗಳು ವರದಿಯಾಗುವ ಸಾಧ್ಯತೆ ಇದೆ. ಹಾಗೂ ಮೇ 15 ರೊಳಗೆ 6.50 ಲಕ್ಷ ರೋಗಿಗಳು ಇರಬಹುದೆಂದು ಕೇಂದ್ರ ಸರ್ಕಾರ ನೀಡಿರುವ ವರದಿಗಳ ಬಗ್ಗೆ ಭಯಪಡುವ ಅಗತ್ಯವೇ ಇಲ್ಲ ಎಂದು ಟೋಪೆ ಜನರಿಗೆ ವಿಡಿಯೋ ಭಾಷಣದ ಮೂಲಕ ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ಈ ಲೆಕ್ಕ ಗಣಿತದ ಮಾದರಿಯಾಗಿದೆ. ಆದಾಗ್ಯೂ, ಕೋವಿಡ್-19 ರಿಂದ ಉಂಟಾಗಿರುವ ಭೀತಿಯನ್ನು ಕಡಿಮೆ ಮಾಡಲು ಮತ್ತು ಪರಿಸ್ಥಿತಿಯನ್ನು ಸುಧಾರಿಸಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡಲಾಗುತ್ತಿರುವುದರಿಂದ ಇಲ್ಲಿ ಯಾವುದೇ ಭಯ ಪಡುವ ಅಗತ್ಯವಿಲ್ಲ ಎಂದಿದ್ದಾರೆ.
ಪ್ರಸ್ತುತ ದಿನಗಳಲ್ಲಿ ಸಾವಿನ ಪ್ರಮಾಣ ಕಡಿಮೆಯಾಗಿದೆ ಮತ್ತು ಚೇತರಿಕೆ ಪ್ರಮಾಣವು ಕೂಡ ಶೇ.13ರಷ್ಟು ಆಗಿದೆ. ಹಾಟ್‌ಸ್ಪಾಟ್‌ಗಳು ಸಹ 14 ರಿಂದ 5ನೇ ಸ್ಥಾನಕ್ಕೆ ಇಳಿದಿದೆ ಎಂದು ಹೇಳಿದರು.