ಕರ್ನಾಟಕ

karnataka

ETV Bharat / bharat

ಹೈದರಾಬಾದ್​​ನ 'ಔಷಧಿ ಮೀನು' ಕಾರ್ಯಕ್ರಮ ರದ್ದು ಮಾಡುವಂತೆ ಎನ್​​​ಜಿಒ ಮನವಿ

ಅಸ್ತಮಾ ಸೇರಿ ಇತರೆ ರೋಗಿಗಳು ಮರ್ರೆಲ್ ಜಾತಿಗೆ ಸೇರಿದ ಮೀನಿನ ಮರಿಯನ್ನು ಗಿಡಮೂಲಿಕೆಗಳಿಂದ ತಯಾರಿಸಲಾದ ಔಷಧಿಯನ್ನು ಮೀನಿನ ಜೊತೆ ಸತತ 3 ವರ್ಷ ತೆಗೆದುಕೊಂಡರೆ ಅವರ ರೋಗ ವಾಸಿಯಾಗುತ್ತದೆ ಎಂಬ ನಂಬಿಕೆ ಇದೆ. ಇದಕ್ಕಾಗಿ ದೂರದ ರಾಜ್ಯಗಳಿಂದಲೂ ಹೈದರಾಬಾದ್​ಗೆ ಜನ ಆಗಮಿಸುತ್ತಾರೆ.

Don't allow 175-year-old 'fish medicine' event: Hyderabad NGO
ಹೈದರಾಬಾದ್​​ನ 'ಔಷಧಿ ಮೀನು' ಕಾರ್ಯಕ್ರಮ ತಡೆಯುವಂತೆ ಎನ್​​​ಜಿಒ ಮನವಿ

By

Published : May 5, 2020, 7:59 PM IST

ತೆಲಂಗಾಣ:ಕೊರೊನಾ ವೈರಸ್ ಹರಡುತ್ತಿರುವ ಹಿನ್ನೆಲೆ ಹೈದರಾಬಾದ್​​ನಲ್ಲಿ ಪ್ರತಿ ವರ್ಷ ನಡೆಯುತ್ತಿದ್ದ ಔಷಧಿ ಮೀನು ಕಾರ್ಯಕ್ರಮ ಈ ಬಾರಿ ನಡೆಯದಂತೆ ನೋಡಿಕೊಳ್ಳಿ ಎಂದು ಬಲಾಲಾ ಹಕ್ಕುಳ ಸಂಘಮ್ ಎಂಬ ಎನ್​​ಜಿಒ ಇಲ್ಲಿನ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದೆ.

ಅಸ್ತಮಾ ಮತ್ತು ಇತರೆ ಉಸಿರಾಟ ಸಮಸ್ಯೆಗಳಿಂದ ಬಳಲುತ್ತಿರುವ ಜನರಿಗೆ ಈ ಔಷಧಿ ಮೀನು ನೀಡಲು ಸಾಮಾನ್ಯವಾಗಿ ಪ್ರತಿ ವರ್ಷದ ಜೂನ್ ಮೊದಲ ವಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ. ಈ ಕಾರ್ಯಕ್ರಮದಲ್ಲಿ ಲಕ್ಷಾಂತರ ಜನರು ಭಾಗಿಯಾಗುತ್ತಾರೆ. ಈ ಹಿನ್ನೆಲೆ ಈ ಕಾರ್ಯಕ್ರಮಕ್ಕೆ ಅವಕಾಶ ನೀಡಬಾರದು ಎಂದು ಸಂಸ್ಥೆ ಕೋರಿದೆ.

ಈ ಬಗ್ಗೆ ಮಾತನಾಡಿರುವ ಎನ್​ಜಿಒದ ಗೌರವಾಧ್ಯಕ್ಷ ಅಚ್ಯುತ್​​ ರಾವ್​​, ಇಂತಹ ಹಲವು ರೋಗಗಳಿಗೆ ಈ ಔಷಧಿ ಮೀನು ಪದ್ಧತಿ ಅವೈಜ್ಞಾನಿಕ ಅಂತ ಈಗಾಗಲೇ ಸಾಬೀತಾಗಿದೆ. ಅಲ್ಲದೆ ಈ ಕಾರ್ಯಕ್ರಮ ಆಯೋಜಕರಾದ ಭಾಥಿನಿ ಸಹೋದದರಿಗೆ ರಾಜ್ಯ ಸರ್ಕಾರ ಯಾವುದೇ ಅನುಕೂಲ ಮಾಡಿಕೊಡಬಾರದು ಎಂದಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆಯೇ ತಿಳಿಸಿರುವಂತೆ ವೃದ್ಧರು ಹಾಗೂ ಮಕ್ಕಳು ಈ ಕೊರೊನಾ ಸೋಂಕಿಗೆ ಅತಿ ಬೇಗನೆ ತುತ್ತಾಗುತ್ತಾರೆ ಎಂದಿದೆ. ಈ ಕಾರ್ಯಕ್ರಮಗಳಲ್ಲಿ ಯಾರಾದರೂ ಒಬ್ಬ ಸೋಂಕಿತ ಬಂದಿದ್ದರೆ, ಅಲ್ಲಿರುವ ಎಲ್ಲರಿಗೂ ಸೋಂಕು ತಗುಲುವ ಸಾಧ್ಯತೆ ಇರುತ್ತದೆ ಎಂದಿದ್ದಾರೆ.

ABOUT THE AUTHOR

...view details