ಕರ್ನಾಟಕ

karnataka

ETV Bharat / bharat

ಚಿತ್ರಕೂಟದಲ್ಲಿ ಐತಿಹಾಸಿಕ 'ಕತ್ತೆ ಜಾತ್ರೆ': ಇದಕ್ಕಿದೆ ಮೊಘಲ್​ ಸಾಮ್ರಾಜ್ಯದ ಇತಿಹಾಸ

ದೀಪಾವಳಿ ಹಬ್ಬದ ಮರುದಿನ ಉತ್ತರ ಪ್ರದೇಶದ ಚಿತ್ರಕೂಟದಲ್ಲಿ ಕತ್ತೆ ಮೇಳ ಆಯೋಜಿಸಲಾಗಿತ್ತು. ಆದರೆ ಕೊರೊನಾ ಬಿಕ್ಕಟ್ಟಿನ ಕಾರಣಕ್ಕೆ ಈ ಬಾರಿ 'ಕತ್ತೆ ಜಾತ್ರೆ'ಯಲ್ಲಿ ವ್ಯಾಪಾರ ವಹಿವಾಟು ನೀರಸವಾಗಿತ್ತು.

donkey fair
ಕತ್ತೆ ಜಾತ್ರೆ ಆಯೋಜನೆ

By

Published : Nov 16, 2020, 12:57 PM IST

ಚಿತ್ರಕೂಟ/ಉತ್ತರಪ್ರದೇಶ: ದೀಪಾವಳಿಯ ಮರುದಿನ ದೇಶದ ಕತ್ತೆಗಳ ಎಲ್ಲ ವ್ಯಾಪಾರಿಗಳು ತಮ್ಮ ಕತ್ತೆಗಳೊಂದಿಗೆ ರಾಮ್‌ಘಾಟ್ ಬಳಿಯ ಐತಿಹಾಸಿಕ ಕತ್ತೆಗಳ ಮೇಳದಲ್ಲಿ ಪಾಲ್ಗೊಂಡಿದ್ದರು. ಮೊಘಲರ ಆಳ್ವಿಕೆ ಕಾಲದಿಂದಲೂ ನಡೆಯುತ್ತಿರುವ ಈ ಕತ್ತೆ ಜಾತ್ರೆಯನ್ನು ಮೊಘಲ್ ದೊರೆ ಔರಂಗಜೇಬ್ ಪ್ರಾರಂಭಿಸಿದ್ದರು.

ಕತ್ತೆ ಜಾತ್ರೆ ಆಯೋಜನೆ

ಔರಂಗಜೇಬನ ಸೇನೆಯಲ್ಲಿನ ಕುದುರೆಗಳು ಇದ್ದಕ್ಕಿದ್ದಂತೆ ಅನಾರೋಗ್ಯದಿಂದ ಸಾವನ್ನಪ್ಪಿದ ನಂತರ ತನ್ನ ಸೇನೆಯಲ್ಲಿ ಕುದುರೆಗಳ ಕೊರತೆ ಉಂಟಾಗಿದ್ದರಿಂದ ಮೊಘಲ್ ದೊರೆಯು ಕತ್ತೆಗಳು ಮತ್ತು ಹೇಸರಗತ್ತೆಗಳನ್ನು ಖರೀದಿಸಿದ್ದ ಎಂದು ಹೇಳಲಾಗುತ್ತದೆ. ಅಂದಿನಿಂದ, ಈ ಮೇಳವನ್ನು ನಿರಂತರವಾಗಿ ಆಯೋಜಿಸಲಾಗುತ್ತಿದೆ.

ಧಾರ್ಮಿಕ ನಗರವಾದ ಚಿತ್ರಕೂಟದ ರಾಮ್‌ಘಾಟ್‌ನಲ್ಲಿರುವ ಮಂದಾಕಿನಿ ನದಿಯ ದಡದಲ್ಲಿ ನಡೆಯುವ ಈ ಜಾತ್ರೆಯನ್ನು ಪ್ರತಿವರ್ಷ ಆಯೋಜಿಸುತ್ತಾ ಬರುತ್ತಿದ್ದು, ಕತ್ತೆ ಮೇಳದ ಎಲ್ಲ ವ್ಯವಸ್ಥೆಗಳನ್ನು ಜಿಲ್ಲಾಡಳಿತ ನಿರ್ವಹಿಸುತ್ತದೆ.

ಈ ದಿನ ಕತ್ತೆಗಳನ್ನು ಖರೀದಿಸಿದ್ರೆ ಅಥವಾ ಮಾರಾಟ ಮಾಡಿದ್ರೆ ಲಕ್ಷ್ಮೀ(ಹಣ) ಒಲಿಯುತ್ತಾಳೆ ಎಂಬ ನಂಬಿಕೆ ಇರುವುದರಿಂದ ದೇಶದ ಮೂಲೆ - ಮೂಲೆಗಳಿಂದ ಕತ್ತೆ ವ್ಯಾಪಾರಿಗಳು ಇಲ್ಲಿಗೆ ಬರುತ್ತಾರೆ.

ABOUT THE AUTHOR

...view details