ನ್ಯೂಯಾರ್ಕ್:26/11 ಮುಂಬೈ ಉಗ್ರ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ಪಾಕ್ನಿಂದ ಇಂದು ಬಂಧನವಾಗಿದ್ದು, ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ವೀಟ್ ಮಾಡಿದ್ದಾರೆ.
10 ವರ್ಷಗಳ ಹುಡುಕಾಟದ ಫಲ ಸಕ್ಸಸ್: ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಬಂಧನಕ್ಕೆ ಟ್ರಂಪ್ ಟ್ವೀಟ್! - ಹಫೀಜ್ ಸಯೀದ್
ಉಗ್ರ ಸಂಘಟನೆಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ಪಾಕ್ನಿಂದ ಬಂಧನವಾಗಿದ್ದು, ಇದರಿಂದ ಸಂತಸಗೊಂಡಿರುವ ಅಮೆರಿಕ ಅಧ್ಯಕ್ಷ ಟ್ರಂಪ್ ಸಂಭ್ರಮ ವ್ಯಕ್ತಪಡಿಸಿದ್ದಾರೆ.
ಟ್ರಂಪ್ ಟ್ವೀಟ್
ಸುಮಾರು 10 ವರ್ಷಗಳ ಹುಡುಕಾಟದ ಫಲವಾಗಿ ಮುಂಬೈ ಉಗ್ರ ದಾಳಿಯ ಮಾಸ್ಟರ್ ಮೈಂಡ್ ಪಾಕ್ನಿಂದ ಬಂಧನವಾಗಿದ್ದಾರೆ. ಕಳೆದ ಎರಡು ವರ್ಷಗಳಿಂದ ಪಾಕ್ ಮೇಲೆ ಹಾಕಿರುವ ಒತ್ತಡ ಕೊನೆಗೂ ಯಶಸ್ವಿಯಾಗಿದೆ ಎಂದು ಅವರು ಹೇಳಿದ್ದಾರೆ.